ಸಾಮಾನ್ಯವಾಗಿ ಅನೇಕ ಮಹಿಳೆಯರು ಪಾರ್ಲರ್ ಗೆ ಹೋಗೋದೇ ಐಬ್ರೋ ಮಾಡಿಸೋಕೆ. ಐಬ್ರೋ ಮಾಡುವಾಗ ನೋವಾಗೋದು ಸಹಜ. ಕೆಲವರ ಕಣ್ಣಲ್ಲಿ ನೀರು ಬಂದ್ರೆ ಮತ್ತೆ ಕೆಲವರಿಗೆ ಐಬ್ರೋ ಮಾಡುವಾಗ ರಕ್ತವೇ ಬರುವುದುಂಟು. ನೋವಾಗುತ್ತೆ ಅಂತಾ ಐಬ್ರೋ ಮಾಡಿಸಿಕೊಳ್ಳದೆ ಇರಲು ಸಾಧ್ಯವಿಲ್ಲ.
ಅನೇಕರು ಐಬ್ರೋ ಮಾಡಿಸಿಕೊಳ್ಳಲು ಹೆದರುತ್ತಾರೆ. ಮನೆಯಲ್ಲಿಯೇ ಪ್ಲಕ್ಕರ್ ಹಿಡಿದು ನಿಧಾನವಾಗಿ ಐಬ್ರೋ ಮಾಡಿಕೊಳ್ಳುವವರೂ ಇದ್ದಾರೆ. ಪ್ಲಕ್ಕರ್ ಬಳಕೆ ಅಷ್ಟು ಉಪಯುಕ್ತವಲ್ಲ. ಹಾಗೆ ಪದೇ ಪದೇ ಪಾರ್ಲರ್ ಬದಲಿಸುವುದು ಸೂಕ್ತವಲ್ಲ. ಐಬ್ರೋ ಮಾಡಿಸಿದ ನಂತರ ಮತ್ತು ಮೊದಲು ಕೆಲವೊಂದು ನಿಯಮ ಪಾಲಿಸಿದ್ರೆ ನೋವಿನಿಂದ ನೀವು ಮುಕ್ತಿ ಪಡೆಯಬಹುದು.
ಐಬ್ರೋ ಮಾಡಿದ ತಕ್ಷಣ ಯಾವುದಾದ್ರೂ ಕ್ರೀಂ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ನಿಮ್ಮ ಬಳಿ ಟೋನರ್ ಇದ್ದರೆ ಅದನ್ನು ನೀವು ಬಳಸಬಹುದು.
ಒಂದು ವೇಳೆ ಕ್ರೀಂ ಇಲ್ಲ ಎಂದಾದ್ರೆ ಚಿಂತೆ ಬೇಡ. ಐಸ್ ತೆಗೆದುಕೊಂಡು ಐಬ್ರೋ ಮೇಲೆ ರಬ್ ಮಾಡಿಕೊಳ್ಳಿ. ಅದು ನೋವನ್ನು ಕಡಿಮೆ ಮಾಡುತ್ತದೆ.
ಐಬ್ರೋ ಮಾಡುವ ವೇಳೆ ನಿಮಗೆ ಸಾಕಷ್ಟು ನೋವಾಗ್ತಾ ಇದ್ದರೆ, ಐಬ್ರೋ ಮಾಡುವ ಮೊದಲು ಮಿಂಟ್ ಅಂಶ ಇರುವ ಟೂತ್ ಪೇಸ್ಟ್ ಹಚ್ಚಿಕೊಳ್ಳಿ.
ಪೌಡರ್ ಹಚ್ಚಿಕೊಳ್ಳುವುದು ಒಳ್ಳೆಯದು. ಇದರಿಂದ ಚರ್ಮ ಮೃದುವಾಗಿ, ಕೂದಲು ಸುಲಭವಾಗಿ ಬರುತ್ತದೆ.
ಈ ಎಲ್ಲ ಕ್ರಮಗಳ ಜೊತೆಗೆ ಕೂದಲು ದಪ್ಪಗೆ ಬರುವವರೆಗೆ ಕಾಯಬೇಡಿ. ದಪ್ಪಗೆ ಕೂದಲು ಬಂದರೆ ಐಬ್ರೋ ಮಾಡುವಾಗ ಮತ್ತಷ್ಟು ನೋವಾಗುತ್ತದೆ.