ಸೆಂಟ್, ಡಿಯೋಡರೆಂಟ್ ಗಳನ್ನು ಇಷ್ಟಪಡುವಷ್ಟೇ ಜನ ದ್ವೇಷಿಸುತ್ತಾರೆ. ಕೆಲವರಿಗೆ ಆ ವಾಸನೆ ಇಷ್ಟವಾಗುವುದೇ ಇಲ್ಲ. ಬಳಕೆಗೂ ಮುನ್ನ ಸರಿಯಾದ ಸುಗಂಧ ದ್ರವ್ಯ ಆರಿಸುವುದು ಕಠಿಣ ಕೆಲಸ.
ಸಾಮಾನ್ಯವಾಗಿ ಇವು ಸಿಟ್ರಸ್ ಹಣ್ಣುಗಳು, ಹೂಗಳಿಂದ ಕೂಡಿರುತ್ತವೆ. ಅದರೆ ಇಂದು ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಸುಗಂಧ ದ್ರವ್ಯಗಳು ರಾಸಾಯನಿಕಗಳಿಂದ ಕೂಡಿವೆ. ನೀವು ಆಯ್ಕೆ ಮಾಡುವಾಗ ಸಾಧ್ಯವಾದಷ್ಟು ನೈಸರ್ಗಿಕ ಉತ್ಪನ್ನಗಳಿಗೇ ಮಹತ್ವ ನೀಡಿ. ಇದರಿಂದ ದೇಹದ ಮೇಲೆ ಅಡ್ಡ ಪರಿಣಾಮ ಬೀರುವುದಿಲ್ಲ.
ಕಚೇರಿಗೆ, ಹೊರಗೆ ಸುತ್ತಲು ಹೋಗುವಾಗ ಹಗಲಿನ ಸುಗಂಧ ದ್ರವ್ಯ ಬಳಸಿ. ರಾತ್ರಿಯಾದರೆ ಹಗುರವಾದ ಸುವಾಸನೆ ಬೀರುವ ದ್ರವ್ಯಗಳು ಸಾಕು. ಕೊಳ್ಳುವ ಮುನ್ನ ಅದರ ಲೇಬಲ್ ಪರೀಕ್ಷಿಸಿಕೊಳ್ಳಿ. ಹಗಲಿನಲ್ಲಿ ಸೊಂಟ, ಮೊಣಕಾಲಿಗೂ ಸಿಂಪಡಿಸಿ. ಎಲ್ಲಿ ಹೆಚ್ಚು ಬೆವರುತ್ತದೋ ಅಲ್ಲಿಗೆ ಸಿಂಪಡಿಸಿ. ಮಾಯಿಸ್ಚರೈಸರ್ ಬಳಸಿದ ಬಳಿಕ ಸುಗಂಧ ದ್ರವ್ಯ ಹಾಕಿ.
ಕಿವಿಯ ಹಿಂದೆಯೂ ಹಚ್ಚುವುದರಿಂದ ತಕ್ಷಣ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಮೂಡ್ ದಿನವಿಡೀ ಫ್ರೆಶ್ ಅಗಿರುತ್ತದೆ.