ಬೀಟ್ ರೋಟ್ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಆರೋಗ್ಯಕ್ಕೆ ಹಲವಾರು ಪ್ರಯೋಜನವನ್ನು ನೀಡುತ್ತದೆ. ಇದರಲ್ಲಿ ವಿಟಮಿನ್ ಸಿ, ಫೋಲೇಟ್, ಕಬ್ಬಿಣ, ರಂಜಕ ಮುಂತಾದ ಪೋಷಕಾಂಶಗಳಿವೆ. ಹಾಗಾಗಿ ಚರ್ಮ ಮತ್ತು ಕೂದಲಿನ ಸಮಸ್ಯೆಯನ್ನು ನಿವಾರಿಸಲು ನೀವು ಬೀಟ್ ರೋಟ್ ಅನ್ನು ಬಳಸಬಹುದು.
ತುಟಿಗಳು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಕಪ್ಪು ತುಟಿಗಳು ನಿಮ್ಮ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ತುಟಿಗಳು ಸಾಮಾನ್ಯವಾಗಿ ತೇವಾಂಶ ಕಳೆದುಕೊಂಡು ಕಪ್ಪಾಗುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು ಬೀಟ್ ರೋಟ್ ಅನ್ನು ಬಳಸಿ. ಬೀಟ್ ರೋಟ್ ರಸಕ್ಕೆ ಗ್ಲಿಸರಿನ್ ಮಿಕ್ಸ್ ಮಾಡಿ ತುಟಿಗಳಿಗೆ ಹಚ್ಚಿ.