ಬೀಟ್ರೂಟ್ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಸಾಂಬಾರು, ಪಲ್ಯ, ಸಲಾಡ್ ರೀತಿಯಲ್ಲಿ ಈ ತರಕಾರಿಯನ್ನ ಸೇವನೆ ಮಾಡಲಾಗುತ್ತೆ. ಆದರೆ ಆಹಾರ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಜ್ಯೂಸ್ನ ರೀತಿಯಲ್ಲಿ ಬೀಟ್ರೂಟ್ನ್ನು ಸೇವಿಸಿದ್ರೆ ತುಂಬಾನೆ ಒಳ್ಳೆಯದು. ಬೀಟ್ರೂಟ್ನಲ್ಲಿ ವಿಟಾಮಿನ್, ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂನಂತಹ ಲಾಭದಾಯಕ ಅಂಶವಿದೆ.
ಈ ಬೀಟ್ರೂಟ್ನ ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳೋದ್ರಿಂದ ತ್ವಚೆಯ ಆರೋಗ್ಯ ಹೆಚ್ಚೋದ್ರ ಜೊತೆಗೆ ದೇಹದ ಆರೋಗ್ಯವೂ ವೃದ್ಧಿಯಾಗಲಿದೆ. ಹಾಗಾದ್ರೆ ಯಾವ್ಯಾವ ಸಮಸ್ಯೆಯನ್ನ ಹೊಂದಿರುವವರು ಬೀಟ್ರೂಟ್ ಸೇವನೆ ಹೆಚ್ಚು ಮಾಡಬೇಕು ಅನ್ನೋದಕ್ಕೆ ವಿವರಣೆ ಇಲ್ಲಿದೆ ನೋಡಿ.
ಬೀಟ್ರೂಟ್ನ ನಿಯಮಿತ ಸೇವನೆಯಿಂದ ರಕ್ತದೊತ್ತಡವನ್ನ ನಿಯಂತ್ರಣಕ್ಕೆ ತರಬಹುದು. ಇದು ಅಧಿಕ ಹಾಗೂ ಕಡಿಮೆ ರಕ್ತದೊತ್ತಡಗಳೆರಡನ್ನೂ ನಿಯಂತ್ರಣಕ್ಕೆ ತರುವ ಸಾಮರ್ಥ್ಯ ಹೊಂದಿದೆ.
ದೇಹದಲ್ಲಿ ಪೊಟ್ಯಾಶಿಯಂ ಕೊರೆತೆಯಿಂದ ಬಳಲುತ್ತಿರುವವರೂ ಸಹ ಬೀಟ್ರೂಟ್ನಿಂದ ಲಾಭ ಪಡೆಯಬಹುದು. ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿದ್ದಲ್ಲಿ ಅದನ್ನ ಕರಗಿಸಲು ಬೀಟ್ರೂಟ್ ಜ್ಯೂಸ್ ಅತ್ಯಂತ ಸಹಕಾರಿ. ಇದು ಮಾತ್ರವಲ್ಲದೇ ಅನೀಮಿಯಾದಿಂದ ರಕ್ತದ ಕೊರತೆ ಹೊಂದಿರುವವರಿಗೂ ಬೀಟ್ರೂಟ್ ಸೇವನೆ ಒಳ್ಳೆಯದು.
ಮಧುಮೇಹ, ಕ್ಯಾನ್ಸರ್, ತಲೆಗೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿರುವವರು ಬೀಟ್ ರೂಟ್ ಸೇವನೆ ಮಾಡೋದು ತುಂಬಾನೇ ಒಳ್ಳೆಯದು ಅಂತಾರೆ ಆಹಾರ ತಜ್ಞರು.