ಚಾಮರಾಜನಗರ: ರೈತರೊಬ್ಬರು ಬೀಟ್ ರೂಟ್ ಬೆಳೆ ಬೆಳೆಯಲೆಂದು ಬಿತ್ತನೆ ಮಾಡಿದರೆ ಬಂದಿದ್ದು ಮಾತ್ರ ಮೂಲಂಗಿಯಂತಹ ಬೆಳೆ… ಇದನ್ನು ಕಂಡು ಕಂಗಾಲಾಗಿರುವ ರೈತ ಕಳಪೆ ಬಿತ್ತನೆ ಬೀಜದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಿ.ಜಿ.ದೊಡ್ಡಿ ಗ್ರಾಮದ ರೈತ ಷಡಕ್ಷರಿ ಎಂಬುವವರು ಒಂದುವರೆ ಎಕರೆ ಜಮೀನಿನಲ್ಲಿ ಬೀಟ್ ರೂಟ್ ಬಿತ್ತನೆ ಮಾಡಿದ್ದರು. ಆದರೆ ಮೂಲಂಗಿ ರೀತಿಯ ಬೀಟ್ ರೂಟ್ ಬೆಳೆ ಬಂದಿರುವುದು ಕಂಡು ಶಾಕ್ ಆಗಿದ್ದಾರೆ.
ರೈತ ಷಡಕ್ಷರಿ ಒಡೆಯರಪಾಳ್ಯ ಗ್ರಾಮದ ನಾಗಜ್ಯೋತಿ ಆಗ್ರೋ ಸೆಂಟರ್ ನಲ್ಲಿ 9,800 ರೂಪಾಯಿ ಕೊಟ್ಟು ಸಾಕಾಟಾ ಎಂಬ ಕಂಪನಿಯ ಬೀಟ್ ರೂಟ್ ಬೀಜ ಖರೀದಿಸಿದ್ದರು. ಆದರೆ ಮೂಲಂಗಿ ರೀತಿಯ ಬೆಳೆ ಬಂದಿರುವುದು ಕಂಡು ಕಂಗಾಲಾಗಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಕಂಪನಿ ಪರಿಹಾರ ನೀಡಿಲ್ಲ. ಲಕ್ಷಾಂತರ ರೂಪಾಪಿ ಆದಾಯ ನಿರೀಕ್ಷೆಯಲ್ಲಿದ್ದ ರೈತ ಬೀಟ್ ರೂಟ್ ಬದಲು ಮೂಲಂಗಿ ರೀತಿಯ ಬೆಳೆ ಬಂದಿದ್ದು ನಷ್ಟಕ್ಕೆ ಸಿಲುಕಿದ್ದಾರೆ.