ಲಖ್ನೋ: ಬಿಯರ್ ಬೆಲೆ ಇಂದಿನಿಂದ ಉತ್ತರಪ್ರದೇಶದಲ್ಲಿ 20 ರೂಪಾಯಿ ಕಡಿಮೆಯಾಗಿದೆ. ಅಂದ ಹಾಗೆ, ಉತ್ತರ ಪ್ರದೇಶ ಸರ್ಕಾರದ ಹೊಸ ಅಬಕಾರಿ ನೀತಿ ಇಂದಿನಿಂದ ಜಾರಿಗೆ ಬಂದಿದ್ದು, ಬಿಯರ್ ಬೆಲೆ ಕಡಿಮೆಯಾಗಿದೆ.
ಅಬಕಾರಿ ಸುಂಕ ಮತ್ತು ಬಿಯರ್ ಪರವಾನಿಗೆ ಶುಲ್ಕದಲ್ಲಿ ಬದಲಾವಣೆ ಮಾಡಿಲ್ಲ. ಬಿಯರ್ ಬಳಕೆ ಹೆಚ್ಚಳ ಮಾಡುವ ಉದ್ದೇಶದಿಂದ ಬೆಲೆಯನ್ನು ಕಡಿಮೆ ಮಾಡಲಾಗಿದೆ.
ಕೊರೋನಾ ಸಾಂಕ್ರಾಮಿಕ ರೋಗ ಆರಂಭವಾದ ನಂತರದಲ್ಲಿ ಬಿಯರ್ ಮಾರಾಟದ ಮೇಲೆ ಪರಿಣಾಮ ಉಂಟಾಗಿದೆ. ಬಿಯರ್ ಬಳಕೆಗೆ ಉತ್ತೇಜನ ನೀಡಲು ಕ್ರಮಕೈಗೊಳ್ಳಲಾಗಿದೆ. ಶೇಕಡ 30 ರಷ್ಟು ಮಾರಾಟ ಕುಸಿತವಾಗಿತ್ತು. ಹೀಗಾಗಿ ಚಿಲ್ಲರೆ ಅಂಗಡಿಗಳ ವಾರ್ಷಿಕ ಪರವಾನಿಗೆ ಶುಲ್ಕ ಬದಲಾವಣೆಗೆ ಉತ್ತರಪ್ರದೇಶ ಸರ್ಕಾರ ಕ್ರಮಕೈಗೊಂಡಿದೆ.
ಉತ್ತರಪ್ರದೇಶ ಅಬಕಾರಿ ನೀತಿಯ ಅನ್ವಯ ನೆರೆ ಹೊರೆ ರಾಜ್ಯಗಳಾದ ದೆಹಲಿ, ಹರಿಯಾಣ, ಪಂಜಾಬ್ ಗಳಿಗಿಂತ ಉತ್ತರಪ್ರದೇಶದಲ್ಲಿ ಬಿಯರ್ ಚಿಲ್ಲರೆ ಮಾರಾಟದ ದರ ಜಾಸ್ತಿ ಇದೆ. ಈ ಹಿನ್ನೆಲೆಯಲ್ಲಿ ಬಿಯರ್ ಬೆಲೆಯನ್ನು ಇಳಿಕೆ ಮಾಡಲಾಗಿದೆ.
ಆದರೆ, ಬಿಯರ್ ಖರೀದಿ ಅಗ್ಗವಾಗಿದ್ದರೆ, ಭಾರತೀಯ ಮತ್ತು ಇಂಗ್ಲಿಷ್ ಮದ್ಯದ ಬೆಲೆಯಲ್ಲಿ ಹೆಚ್ಚಳವಾಗಲಿದೆ. ವಿವಿಧ ಬ್ರಾಂಡ್‌ಗಳ ಇಂಗ್ಲಿಷ್ ಮದ್ಯದ ಬೆಲೆಯನ್ನು ಶೇಕಡಾ 15 ರಿಂದ 20 ರಷ್ಟು ಹೆಚ್ಚಿಸಲಾಗಿದೆ. ಏಪ್ರಿಲ್ 1 ರಿಂದ ಯುಪಿಯಲ್ಲಿ ಬಿಯರ್ ಅಗ್ಗವಾಗಿದ್ದು, ಇಂಗ್ಲಿಷ್ ಮತ್ತು ಕಂಟ್ರಿ ಮೇಡ್ ಲಿಕ್ಕರ್ ದುಬಾರಿಯಾಗಿದೆ.