ಮುಟ್ಟಿನ ಸಮಯದಲ್ಲಿ ಮಹಿಳೆಯರು ಎಲ್ಲದರಿಂದ ದೂರವಿರುತ್ತಾರೆ. ಶಾರೀರಿಕ ಸಂಬಂಧ ಕೂಡ ಬೆಳೆಸುವುದಿಲ್ಲ. ಮಿಚಿಗನ್ ವಿಶ್ವವಿದ್ಯಾಲಯ ಮುಟ್ಟು ಹಾಗೂ ಶಾರೀರಿಕ ಸಂಬಂಧದ ಬಗ್ಗೆ ಮಹತ್ವದ ವಿಷ್ಯವೊಂದನ್ನು ಹೇಳಿದೆ.
ಮುಟ್ಟಿನ ದಿನಗಳಲ್ಲಿ ಶಾರೀರಿಕ ಸಂಬಂಧ ಬೆಳೆಸುವುದ್ರಿಂದ ಮುಟ್ಟಿನ ದಿನ ಕಡಿಮೆಯಾಗುತ್ತದೆ. ಸೆಳೆತ ಕಡಿಮೆಯಾಗುವ ಜೊತೆಗೆ ಅತಿ ಬೇಗ ಬ್ಲೀಡಿಂಗ್ ನಿಲ್ಲುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಇದು ಮುಟ್ಟಿನ ನೋವನ್ನೂ ಕಡಿಮೆ ಮಾಡಿ, ಒತ್ತಡದಿಂದ ಮಹಿಳೆಯರನ್ನು ದೂರವಿಡುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.
ಮುಟ್ಟಿನ ವೇಳೆ ಶಾರೀರಿಕ ಸಂಬಂಧ ಬೆಳೆಸುವುದ್ರಿಂದ ಉತ್ಪತ್ತಿಯಾಗುವ ಹಾರ್ಮೋನ್ ಪೇನ್ ಕಿಲ್ಲರ್ ಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಮೂರನೇ ಪ್ರಯೋಜನವೆಂದ್ರೆ ಮುಟ್ಟಿನ ವೇಳೆ ಮಹಿಳೆಯರು ಸಂಬಂಧ ಬೆಳೆಸುವುದ್ರಿಂದ ಸಂಗಾತಿ ನಡುವಿನ ಸಂಬಂಧ ಮತ್ತಷ್ಟು ಹೆಚ್ಚಾಗುತ್ತದೆ.
ಮುಟ್ಟಿನ ವೇಳೆ ಎಲ್ಲರೂ ಶಾರೀರಿಕ ಸಂಬಂಧ ಬೆಳೆಸಲು ಮನಸ್ಸು ಮಾಡುವುದಿಲ್ಲ. ಅದು ದಂಪತಿ ಮನಸ್ಥಿತಿಯನ್ನು ಅವಲಂಭಿಸಿರುತ್ತದೆ. ಒಂದು ವೇಳೆ ಸಂಬಂಧ ಬೆಳೆಸಲು ಮುಂದಾದ್ರೆ ಸುರಕ್ಷತೆ ಬಗ್ಗೆ ಹೆಚ್ಚು ಗಮನ ನೀಡಿ. ಅಸುರಕ್ಷಿತ ಸೆಕ್ಸ್ ಅನೇಕ ಲೈಂಗಿಕ ರೋಗಕ್ಕೆ ಕಾರಣವಾಗುತ್ತದೆ