ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಿಗೆ ಬಿಎಡ್ ಕಡ್ಡಾಯಗೊಳಿಸಲಾಗಿದೆ.
2008 ರ ಫೆಬ್ರವರಿ 4ರ ನಂತರ ನೇಮಕಗೊಂಡ ಉಪನ್ಯಾಸಕರಿಗೆ ಬಿಎಡ್ ಪದವಿ ಕಡ್ಡಾಯಗೊಳಿಸಿ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. 2008ರ ಫೆಬ್ರವರಿ 4 ಕ್ಕೆ ಮೊದಲು ನೇಮಕವಾಗಿ ಅನುದಾನಕ್ಕೆ ಒಳಪಟ್ಟ ಉಪನ್ಯಾಸಕರು ಬಿಎಡ್ ಪದವಿ ಪಡೆಯಲು ಷರತ್ತು ವಿಧಿಸಲು ಅವಕಾಶವಿಲ್ಲ ಎಂದು ಹೇಳಲಾಗಿದೆ. 2008 ರ ಫೆ. 4 ನಂತರ ನೇಮಕವಾದ ಉಪನ್ಯಾಸಕರಿಗೆ ಬಿಎಡ್ ಪದವಿ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಲಾಗಿದೆ.