alex Certify ‘ಟ್ಯಾಂಗ್ ಪಿಂಗ್’ ನಿಂದಾಗಿ ಈ ದೇಶದಲ್ಲಿ ಮಕ್ಕಳಿಗೆ ಬಾಲ್ಯ ವಿವಾಹ ಮಾಡ್ತಿದ್ದಾರೆ ಪೋಷಕರು, ಇದೆಂಥಾ ಸಮಸ್ಯೆ ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಟ್ಯಾಂಗ್ ಪಿಂಗ್’ ನಿಂದಾಗಿ ಈ ದೇಶದಲ್ಲಿ ಮಕ್ಕಳಿಗೆ ಬಾಲ್ಯ ವಿವಾಹ ಮಾಡ್ತಿದ್ದಾರೆ ಪೋಷಕರು, ಇದೆಂಥಾ ಸಮಸ್ಯೆ ಗೊತ್ತಾ ?

ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ಅನೇಕ ಜವಾಬ್ದಾರಿಗಳಿಂದ ತುಂಬಿರುತ್ತದೆ. ಆದ್ದರಿಂದ ಒಬ್ಬ ವ್ಯಕ್ತಿಯು ಪ್ರಬುದ್ಧನಾದ ಬಳಿಕ ವಿವಾಹವಾಗುವುದು ಸೂಕ್ತ. ಇತ್ತೀಚೆಗೆ ಚೀನಾದಲ್ಲಿ ನಡೆದ ಬಾಲ್ಯ ವಿವಾಹವೊಂದು ಸದ್ದು ಮಾಡುತ್ತಿವೆ. ವರನ ವಯಸ್ಸು 15 ಮತ್ತು ವಧುವಿನ ವಯಸ್ಸು ಕೇವಲ 14 ವರ್ಷಗಳು. ಪೋಷಕರ ಒಪ್ಪಿಗೆ ಮೇರೆಗೆ ಈ ಮದುವೆ ನಡೆದಿದೆ.

ಚೀನಾದ ಕಾನೂನಿನ ಪ್ರಕಾರ ಮದುವೆಗೆ ಹುಡುಗನ ಕನಿಷ್ಠ ವಯಸ್ಸು 22 ವರ್ಷಗಳು ಮತ್ತು ಹುಡುಗಿಯ ವಯಸ್ಸು 20 ವರ್ಷಗಳು. ಆದ್ದರಿಂದ ಚೀನಾದ ಆಡಳಿತವು ಈ ಮದುವೆಯಲ್ಲಿ ಹಸ್ತಕ್ಷೇಪ ಮಾಡಿದೆ, ವಿವಾಹ ನೋಂದಣಿಯನ್ನು ಅನುಮತಿಸಲಿಲ್ಲ. ವಿಚಿತ್ರವೆಂದರೆ ಯುವಕರಲ್ಲಿ ಹೆಚ್ಚುತ್ತಿರುವ ಟ್ಯಾಂಗ್ ಪಿಂಗ್ ಟ್ರೆಂಡ್‌ನಿಂದಾಗಿ ಪೋಷಕರು ಬಾಲ್ಯವಿವಾಹ ಮಾಡುತ್ತಿದ್ದಾರಂತೆ.

ಟ್ಯಾಂಗ್ ಪಿಂಗ್ ಎಂದರೇನು ?

ಇದೊಂದು ರೀತಿಯ ಮನಸ್ಥಿತಿ. ಕಷ್ಟಕರವಾದ ಪ್ರಯತ್ನ-ಮಾಡುವ ನಡವಳಿಕೆಯ ವಿರುದ್ಧದ ದಂಗೆ. ಚೀನೀ ಕಮ್ಯುನಿಸ್ಟ್ ಪಕ್ಷದ ಕಾರ್ಯಸೂಚಿಯ ಪ್ರಕಾರ ಎಫರ್ಟ್ ಮೇಕಿಂಗ್ ನಡವಳಿಕೆ ಅಂದರೆ ದೀರ್ಘ ಕೆಲಸದ ಸಮಯ, ಕಠಿಣ ಪರಿಶ್ರಮ ಮತ್ತು ಯಾವಾಗಲೂ ಹೊಸದನ್ನು ಮಾಡುವುದು ಇವನ್ನೆಲ್ಲ ಉಲ್ಲೇಖಿಸಲಾಗಿದೆ. ಆದರೆ ಚೀನಾದ ಯುವಕರ ದೊಡ್ಡ ವರ್ಗವೇ ಇದರ ವಿರುದ್ಧ ಬಂಡೆದ್ದಿದೆ. ಯುವಕರು ಉದ್ಯೋಗ ಮಾಡಲು ಮುಂದಾಗುತ್ತಿಲ್ಲ, ಮದುವೆಗೂ ಹಿಂದೇಟು ಹಾಕ್ತಿದ್ದಾರೆ.

ಕೆಲ ಯುವಕರು ಟ್ಯಾಂಗ್ ಪಿಂಗ್ ಬೆಂಬಲಕ್ಕೆ ನಿಂತಿದ್ದಾರೆ. 30-35 ನೇ ವಯಸ್ಸಿನಲ್ಲಿ ದತ್ತು ಪಡೆಯಲು ಪೋಷಕರನ್ನು ಹುಡುಕುತ್ತಿದ್ದಾರೆ. ಇದರಿಂದ ಹೆಚ್ಚು ಪರಿಶ್ರಮವಿಲ್ಲದೆ ಮನೆಯಲ್ಲಿ ಆರಾಮವಾಗಿ ಕುಳಿತು ಸಣ್ಣಪುಟ್ಟ ಕೆಲಸಗಳನ್ನು ಮಾಡಬಹುದು ಎಂಬುದು ಅವರ ಲೆಕ್ಕಾಚಾರ.

ಹೆಚ್ಚುತ್ತಿದೆ ಅವಿವಾಹಿತರ ಸಂಖ್ಯೆ !

ಚೀನಾದಲ್ಲಿ ಮಾತ್ರವಲ್ಲ ಅನೇಕ ದೇಶಗಳಲ್ಲಿ ಸಹ ಎಂದಿಗೂ ಮದುವೆಯಾಗದ ಮತ್ತು ಯಾವಾಗಲೂ ಒಂಟಿಯಾಗಿರಲು ಇಷ್ಟಪಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಂಕಿ-ಅಂಶಗಳ ಪ್ರಕಾರ ಪ್ರಸ್ತುತ ಬ್ರಿಟನ್‌ನಲ್ಲಿ 10 ವಯಸ್ಕರಲ್ಲಿ 4 ಜನರು ತಮ್ಮ ಸ್ವಂತ ಇಚ್ಛೆಯ ಪ್ರಕಾರ ಏಕಾಂಗಿಯಾಗಿ ಉಳಿಯಲು ಇಚ್ಛಿಸುತ್ತಿದ್ದಾರೆ.

ಆದರೆ ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗುವುದು ಕಾನೂನುಬದ್ಧವಾಗಿ ಅಪರಾಧ. ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡುವ ದೇಶ ಅಥವಾ ಸಮಾಜದಲ್ಲಿ ಮದುವೆ ಮುರಿದು ಬೀಳುವ ಸಾಧ್ಯತೆ ಹೆಚ್ಚು. ಜೊತೆಗೆ ಮಕ್ಕಳ ಭವಿಷ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...