ಹೊಸದುರ್ಗ ಕನಕಧಾಮದ ಈಶ್ವರಾನಂದ ಪುರಿ ಸ್ವಾಮೀಜಿ ತಮಗಾದ ಕಹಿ ಅನುಭವವೊಂದನ್ನು ಹೇಳಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ನಾನು ಹೊಸದುರ್ಗ ತಾಲೂಕಿನ ಬಾಗೂರಿನಲ್ಲಿರುವ ಚೆನ್ನಕೇಶವ ದೇಗುಲ ಪ್ರವೇಶಿಸಿದ್ದೆ ಎಂಬ ಕಾರಣಕ್ಕೆ ದೇವಾಲಯವನ್ನೇ ತೊಳೆದಿದ್ದರು ಎಂದು ವಿಷಾದಿಸಿದ್ದಾರೆ.
ಶುಕ್ರವಾರದಂದು ಸಾಣೇಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ‘ಮಠಗಳ ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ ಕೊಡುಗೆ’ ಗೋಷ್ಠಿಯಲ್ಲಿ ಮಾತನಾಡುವ ವೇಳೆ ಈ ವಿಷಯ ಹಂಚಿಕೊಂಡಿದ್ದಾರೆ.
ನಾನು ಆ ದೇವಾಲಯಕ್ಕೆ ಹೋಗಿ ಬಂದ ಬಳಿಕ ಈ ವಿಷಯ ತಿಳಿಯಿತು. ಮುಜರಾಯಿ ಇಲಾಖೆಗೆ ಈ ದೇವಾಲಯ ಸೇರಿದೆ ಎಂಬ ವಿಷಯ ನನಗೆ ತಿಳಿದಿದ್ದರೆ ಕನಕದಾಸರಂತೆ ಪ್ರತಿಭಟನೆ ಮಾಡಿ ಒಳಗೆ ಪ್ರವೇಶಿಸುತಿದ್ದೆ ಎಂದ ಅವರು, ದೇವಾಲಯ ತೊಳೆಯುವ ಬದಲು ನಿಮ್ಮ ಮನಸ್ಸಿನ ಕೊಳೆಯನ್ನು ತೊಳೆದುಕೊಳ್ಳಿ ಎಂದು ಹೇಳಿದ್ದಾರೆ.