alex Certify ಬಯಲಾಯ್ತು ‘ವಿಶ್ವದ ಹಾಟೆಸ್ಟ್ ಮಾಮ್ ‘ ಸೌಂದರ್ಯದ ಗುಟ್ಟು: ವಯಸ್ಸು 45 ಆದರೂ ನೋಡೋದಕ್ಕೆ ಮಾತ್ರ 18 ರ ಹರೆಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಯಲಾಯ್ತು ‘ವಿಶ್ವದ ಹಾಟೆಸ್ಟ್ ಮಾಮ್ ‘ ಸೌಂದರ್ಯದ ಗುಟ್ಟು: ವಯಸ್ಸು 45 ಆದರೂ ನೋಡೋದಕ್ಕೆ ಮಾತ್ರ 18 ರ ಹರೆಯ…!

ಮಹಿಳೆಯರಿಗೆ ಯಾವತ್ತಾದರೂ ಅವರ ವಯಸ್ಸನ್ನ ಕೇಳಿದ್ದಿರಾ? ನಿಮಗೆ ಅಚ್ಚರಿಯಾಗಬಹುದು 100ರಲ್ಲಿ 70% ಪರ್ಸೆಂಟ್ ಮಹಿಳೆಯರು ತಮ್ಮ ನಿಖರವಾದ ವಯಸ್ಸನ್ನ ಹೇಳುವುದೇ ಇಲ್ಲ. ಅವರಿಗೆ ಸದಾ ಚಿರಯುವತಿರಾಗಿಯೇ ಉಳಿಯಬೇಕು ಅನ್ನೋ ಆಸೆ.

ಕೆಲವರಿಗೆ ದೈಹಿಕವಾಗಿ ಫಿಟ್ ಎಂಡ್ ಫೈನ್ ಆಗಿರಬೇಕು ಅನ್ನೋ ಆಸೆಗಳಿದ್ದರೆ, ಇನ್ನು ಕೆಲವರಿಗೆ ಮುಖದ ಕಾಂತಿ ಕಳೆಗುಂದಲೇಬಾರದು, ಚರ್ಮದಲ್ಲಿ ಸುಕ್ಕು ಬೀಳಲೇಬಾರದು ಅನ್ನೊ ಆಸೆ. ಅದಕ್ಕಾಗಿ ಅವರು ಮಾಡೋ ಕೆಲಸಗಳು ಒಂದೆರಡಲ್ಲ. ಆದರೆ ಕೆಲ ಮಹಿಳೆಯರಿರುತ್ತಾರೆ, ಅವರಿಗೆ ದೇವರೇ ಸದಾ ಕಾಲ ಚಿರಯುವತಿಯರಾಗಿಯೇ ಉಳಿಯಲಿ ಅನ್ನೋ ವರ ಕೊಟ್ಟಂತಿರುತ್ತೆ. ಅಂಥವರಲ್ಲಿ ಜೊಲೀನ್ ಡಯಾಜ್ ಕೂಡ ಒಬ್ಬರು.

ಜೊಲೀನ್ ಡಾಯಾಜ್ ಅವರಿಗೆ 45 ವರ್ಷ ವಯಸ್ಸು ಅಂದ್ರೆ ಯಾರೊಬ್ಬರೂ ನಂಬೊದೇ ಇಲ್ಲ. ಸದ್ಯಕ್ಕೆ ಈಕೆ ಕ್ಯಾಲಿಫೋರ್ನಿಯಾದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈಕೆಗೆ ಮೈಲಾನಿ ಪಾರ್ಕ್ಸ್ ಅನ್ನೊ 19 ವರ್ಷದ ಮಗಳಿದ್ದಾಳೆ. ಈಕೆ Instagramನಲ್ಲಿ ಆಗಾಗ ತನ್ನ ಹಾಗೂ ತನ್ನ ಮಗಳ ಫೋಟೋಗಳನ್ನ ಪೋಸ್ಟ್ ಮಾಡುತ್ತಲೇ ಇರುತ್ತಾಳೆ. ಅದರಲ್ಲಿ ಯಾರು ತಾಯಿ, ಯಾರು ಮಗಳು ಅನ್ನೋದೇ ಈಕೆಯ ಫಾಲೋವರ್ಸ್‌ಗಳಿಗೆ ಗೊತ್ತಾಗುವುದಿಲ್ಲ. ಕೆಲವರಂತೂ ಇವರಿಬ್ಬರೂ ಅಕ್ಕ-ತಂಗಿಯರು ಅಂತ ಅಂದುಕೊಂಡಿದ್ದಾರೆ.

ವಯಸ್ಸು 45 ಆದರೂ ಜೊಲೀನ್, ಬೆರಗುಗೊಳಿಸುವ ಮೈಕಟ್ಟು ಮತ್ತು ಚರ್ಮದ ಕಾಂತಿಯನ್ನ ಉಳಿಸಿಕೊಂಡಿದ್ದಾರೆ. ಎಷ್ಟೋ ಯುವಕರು ಈಕೆಯ ಸೌಂದರ್ಯಕ್ಕೆ ಫಿದಾ ಆಗಿ ಈಕೆಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಯಾವಾಗ ಆಕೆ 19 ವರ್ಷದ ಮಗಳಿನ ತಾಯಿ ಅಂದಾಗ ಅವರೆಲ್ಲ ಶಾಕ್ ಆಗಿದ್ದಾರೆ. ಈಕೆಯ ಅದ್ಭುತ ಸೌಂದರ್ಯವನ್ನ ನೋಡಿ “ ವಿಶ್ವದ ಹಾಟೆಸ್ಟ್ ತಾಯಿ“ ಅನ್ನೊ ಪಟ್ಟವನ್ನ ಕೊಟ್ಟಿದ್ದಾರೆ.

ಜೊಲೀನ್ ತನ್ನ ಚರ್ಮದ ಕಾಂತಿ ಉಳಿಸಿಕೊಳ್ಳಲು ಟ್ರೆಟಿನೊಯಿನ್ ಅನ್ನುವ ಔಷಧಿಯನ್ನ ಬಳಸುತ್ತಾರೆ. ಇದು ವಿಟಮಿನ್ ’ಎ’ ಯುಕ್ತವಾಗಿದ್ದು ಇವರ ಸೌಂದರ್ಯದ ರಹಸ್ಯವನ್ನ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

ಈ ಸುಂದರಿ ಆಲ್ಕೋಹಾಲ್ ಸೇವನೆಯಿಂದ ದೂರವಿದ್ದು, ತನ್ನ ಸೌಂದರ್ಯ ಉಳಿಸಿಕೊಳ್ಳುವುದಕ್ಕಾಗಿ ಸಾಕಷ್ಟು ನಿದ್ರೆ ಮಾಡುತ್ತಾರೆ. ಯಾವುದೇ ಕಾರಣಕ್ಕೂ ನಿದ್ರೆ ನಿರ್ಲಕ್ಷ್ಯ ಮಾಡುವುದು ಉತ್ತಮ ಅಲ್ಲ ಅನ್ನುವುದು ಅಂತ ಸಲಹೆ ಕೊಡುತ್ತಾರೆ. ಅದೇ ಸಂದರ್ಶನದಲ್ಲಿ ಜೊಲೀನ್, ಮಗಳು ಸಹೋದರಿಯಂತೆ ಕಾಣಲು, ಕಾರಣ ತನ್ನ ಮಗಳು ಹುಟ್ಟಿದಾಗ ತನ್ನ ವಯಸ್ಸು ಕಡಿಮೆ ಇತ್ತು, ಎಂದು ಹೇಳಿದ್ದಾರೆ.

ಜೊಲೀನ್ Instagram ನಲ್ಲಿ 638,000 ಫಾಲೋವರ್ಸ್ಗಳನ್ನ ಹೊಂದಿದ್ದು, ಮನಸ್ಸು-ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಜೊತೆಗೆ ಯಾವಾಗಲೂ ಖುಷಿ-ಖುಷಿಯಾಗಿರಿ ಹಾಗಾದಾಗಲೇ ನಿಮ್ಮ ಮುಖದ ಕಾಂತಿ ತನ್ನಿಂದ ತಾನೇ ವೃದ್ಧಿಯಾಗುತ್ತೆ. ಈ ರೀತಿಯ ಸಲಹೆಗಳನ್ನ ಆಗಾಗ ತನ್ನ ಅಭಿಮಾನಿಗಳಿಗೆ ಕೊಡ್ತಾನೇ ಇರುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...