ಬೇರೆ ಬೇರೆ ಕಂಪನಿಗಳ, ಬೇರೆ ಬೇರೆ ವಿನ್ಯಾಸದ ಬ್ರಾಗಳು ಮಾರುಕಟ್ಟೆಯಲ್ಲಿವೆ. ಒಳ ಉಡುಪು ಎನ್ನುವ ಕಾರಣಕ್ಕೆ ಅನೇಕರು ಬ್ರಾ ಖರೀದಿ ವೇಳೆ ನಿರ್ಲಕ್ಷ್ಯ ಮಾಡ್ತಾರೆ. ಕಡಿಮೆ ಬೆಲೆಯ, ತಮಗೆ ಸೂಕ್ತವಲ್ಲದ ಬ್ರಾ ಖರೀದಿ ಮಾಡುತ್ತಾರೆ.
ಆದ್ರೆ ಬ್ರಾ ಖರೀದಿ ಮಾಡುವ ವೇಳೆ ನೀವು ಮಾಡುವ ತಪ್ಪುಗಳು ನಿಮ್ಮ ಸೌಂದರ್ಯವನ್ನು ಹಾಳು ಮಾಡುವ ಜೊತೆಗೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಹಾಗಾಗಿ ಬ್ರಾ ಖರೀದಿ ಮಾಡುವ ವೇಳೆ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.
ಸದಾ ಒಳ್ಳೆ ಕಂಪನಿಯ ಬ್ರಾ ಖರೀದಿ ಮಾಡಿ. ಕಡಿಮೆ ಬೆಲೆ ಎನ್ನುವ ಕಾರಣಕ್ಕೆ ಸಿಕ್ಕ ಸಿಕ್ಕ ಕಂಪನಿ ಬ್ರಾ ಖರೀದಿ ಮಾಡುವ ಪ್ರಯತ್ನ ಬೇಡ. ನಿಮ್ಮ ಸ್ತನಕ್ಕೆ ಸರಿ ಹೊಂದುವ ಬ್ರಾಗಳು ಇಲ್ಲಿ ಸಿಗುತ್ತವೆ.
ಬ್ರಾ ಖರೀದಿ ವೇಳೆ ಸೈಜ್ ಗೆ ಹೆಚ್ಚಿನ ಗಮನ ನೀಡಬೇಕು. ಕಡಿಮೆ ಅಥವಾ ಹೆಚ್ಚು ಸೈಜಿನ ಬ್ರಾಗಳು ನಿಮಗೆ ಆರಾಮದ ಅನುಭವ ನೀಡುವುದಿಲ್ಲ. ಬ್ರಾ ಖರೀದಿಗೆ ಮುನ್ನ ನಿಮ್ಮ ಸ್ತನದ ಗಾತ್ರವನ್ನು ತಿಳಿದಿರಿ. ನಿಮಗೆ ಬ್ರಾ ಧರಿಸಿದಾಗ ಆರಾಮದ ಅನುಭವ ನೀಡುವ ಬ್ರಾವನ್ನು ಮಾತ್ರ ಧರಿಸಿ. ಬಿಗಿಯಾದ ಬ್ರಾ ಕಿರಿಕಿರಿಯುಂಟು ಮಾಡುತ್ತದೆ. ರಕ್ತ ಸಂಚಾರಕ್ಕೆ ತೊಂದರೆಯಾಗಬಹುದು.
ಸಣ್ಣ ಸ್ತನದ ಮಹಿಳೆಯರು ದೊಡ್ಡ ಗಾತ್ರದ ಬ್ರಾ ಖರೀದಿ ಮಾಡ್ತಾರೆ. ಈ ವೇಳೆ ಬ್ರಾಂಡ್, ಪ್ಯಾಡೆಡ್, ಮಿಕ್ಸ್ಮೈಜರ್, ಪುಷ್ ಅಪ್ ಇತ್ಯಾದಿ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.