ಗೋಧಿ ಭಾರತೀಯರಿಗೆ ಅಪರೂಪದ ವಸ್ತುವೇನಲ್ಲ. ಗೋಧಿಯಿಂದ ಮಾಡಿದ ಪದಾರ್ಥಗಳು ಆರೋಗ್ಯಕ್ಕೆ ಬೆಸ್ಟ್ ಅನ್ನೋದು ವೈದ್ಯರ ಅಭಿಪ್ರಾಯ. ಕೇವಲ ಆರೋಗ್ಯ ಮಾತ್ರವಲ್ಲ ಸೌಂದರ್ಯಕ್ಕೂ ಗೋಧಿ ಬೇಕು.
ಪ್ರೋಟೀನ್, ಫೈಬರ್, ವಿಟಮಿನ್ ಮತ್ತು ಮಿನರಲ್ಸ್ ಉಳ್ಳ ಗೋಧಿ ಕೂದಲು ಮತ್ತು ಚರ್ಮಕ್ಕೆ ಒಳ್ಳೆಯದು. ಗೋಧಿ ಮೊಳಕೆಯಿಂದ ಮಾಡಿದ ತೈಲವಂತೂ ನಿಮ್ಮ ಸೌಂದರ್ಯದ ಸಂಗಾತಿ. ಇದನ್ನು ಕಾಸ್ಮೆಟಿಕ್ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ಬಳಸುತ್ತಾರೆ.
ಆ್ಯಂಟಿ ಒಕ್ಸಿಡೆಂಟ್ ಗಳ ಸಮೃದ್ಧ ಮೂಲ : ಗೋಧಿ ಮೊಳಕೆಯ ತೈಲದಲ್ಲಿ ವಿಟಮಿನ್ ಇ ಹೇರಳವಾಗಿದೆ, ಇದೊಂದು ಉತ್ತಮ ಆ್ಯಂಟಿ ಒಕ್ಸಿಡೆಂಟ್. 22 ಬಗೆಯ ಪೋಷಕಾಂಶಗಳು ಇದರಲ್ಲಿವೆ. ಇದು ನಿಮ್ಮಲ್ಲಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಚರ್ಮದ ಆರೋಗ್ಯಕ್ಕಂತೂ ಹೇಳಿ ಮಾಡಿಸಿದಂತಹ ಮದ್ದು.
ಉತ್ತಮ ಫೇಸ್ ಕ್ಲೆನ್ಸರ್ : ಗೋಧಿ ಮೊಳಕೆಯ ತೈಲ ನೈಸರ್ಗಿಕ ಎಣ್ಣೆಯಾಗಿರುವುದರಿಂದ ನಿಮ್ಮ ಮುಖವನ್ನು ಸ್ವಚ್ಛಗೊಳಿಸುತ್ತದೆ. ಮುಖದ ಮೃದುತ್ವವನ್ನು ಕಾಪಾಡುತ್ತದೆ. ಮೊಡವೆ ಬಾರದಂತೆ ತಡೆಗಟ್ಟುತ್ತದೆ. ಕೆಲವೇ ಹನಿಗಳಷ್ಟು ಗೋಧಿ ಮೊಳಕೆಯ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಅಥವಾ ಫೇಸ್ ಪ್ಯಾಕ್ ನಂತೆ ಬಳಸಬಹುದು. ಆಯ್ಲಿ ಸ್ಕಿನ್ ಇರುವವರು ವೈದ್ಯರ ಸಲಹೆ ಬಳಿಕ ಬಳಸುವುದು ಉತ್ತಮ.
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ : ಗೋಧಿ ಮೊಳಕೆಯ ಎಣ್ಣೆಯಲ್ಲಿ ಒಕ್ಟಾಕೋಸಾನೊಲ್ ಪ್ರಮಾಣ ಅಧಿಕವಾಗಿದೆ. ಅದು ದೇಹಕ್ಕೆ ಶಕ್ತಿ ಹಾಗೂ ಸ್ಟಾಮಿನಾ ಕೊಡುವುದರ ಜೊತೆಗೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ಚರ್ಮದ ಮೇಲಿನ ಕಲೆಗಳಿಗೆ ಮದ್ದು : ಗೋಧಿ ಮೊಳಕೆ ತೈಲದಲ್ಲಿ ವಿಟಮಿನ್-ಇ ಹೇರಳವಾಗಿರುವುದರಿಂದ ನಿಮ್ಮ ಚರ್ಮಕ್ಕೂ ಕಾಂತಿ ಮತ್ತು ಶಕ್ತಿ ಬರುತ್ತದೆ. ನಿರಂತರವಾಗಿ ಈ ಎಣ್ಣೆಯನ್ನು ಹಚ್ಚುತ್ತಾ ಬಂದರೆ ಚರ್ಮದ ಮೇಲಿನ ಕಲೆಗಳು ಮಾಯವಾಗುತ್ತವೆ. ಆದ್ರೆ ಎಣ್ಣೆ ನೂರಕ್ಕೆ ನೂರರಷ್ಟು ನೈಸರ್ಗಿಕವಾಗಿರಬೇಕು. ನಿಮ್ಮ ಚರ್ಮವನ್ನು ಹೈಡ್ರೈಟ್ ಮಾಡುವ ಮೂಲಕ ಹೊಳಪು ತುಂಬುತ್ತದೆ.
ಕೂದಲಿನ ಕಾಂತಿಗಾಗಿ : ಆರೋಗ್ಯಕರ ತಲೆಗೂದಲಿಗೆ ಗೋಧಿ ಮೊಳಕೆ ತೈಲ ಬೆಸ್ಟ್. ಇದರಲ್ಲಿ ಲಿನೊಲಿಯಿಕ್ ಆಮ್ಲ ಇರುವುದರಿಂದ ನಿಮ್ಮ ಕೂದಲ ಪೋಷಣೆಗೆ ಸಹಕರಿಸುತ್ತದೆ. ಎಳ್ಳೆಣ್ಣೆ ಅಥವಾ ಆಲಿವ್ ಆಯಿಲ್ ಜೊತೆಗೆ 10 ರಲ್ಲಿ ಒಂದು ಭಾಗದಷ್ಟು ಗೋಧಿ ಮೊಳಕೆ ತೈಲವನ್ನು ಮಿಕ್ಸ್ ಮಾಡಿ ಕೂದಲ ಬುಡಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ತಲೆಸ್ನಾನ ಮಾಡಿ.
ಆ್ಯಂಟಿ ಏಜಿಂಗ್ ಪ್ರಾಪರ್ಟಿ : ಯಾವಾಗಲೂ ಯೌವ್ವನ ಹಾಗೇ ಇರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಗೋಧಿ ಮೊಳಕೆ ತೈಲದಲ್ಲಿ ವಿಟಮಿನ್- ಬಿ6, ವಿಟಮಿನ್ ಇ, ಫಾಲಿಕ್ ಆಸಿಡ್ ಇರೋದ್ರಿಂದ ಇದು ವಯಸ್ಸಾಗಿದ್ದರೂ ನಿಮ್ಮ ಚರ್ಮ ಸುಕ್ಕುಗಟ್ಟದಂತೆ ಕಾಪಾಡುತ್ತದೆ. ಡ್ರೈ ಸ್ಕಿನ್, ಸೋರಿಯಾಸಿಸ್ ನಂತಹ ಸಮಸ್ಯೆಗಳು ಬರುವುದಿಲ್ಲ. ತೈಲದಲ್ಲಿರುವ ವಿಟಮಿನ್ ಬಿ ಅಂಗಾಂಶ ಹಾನಿಯನ್ನು ತಪ್ಪಿಸುತ್ತದೆ.
ಆದ್ರೆ ಒಂದು ಅಂಶ ನಿಮ್ಮ ಗಮನದಲ್ಲಿರಲಿ, ಗೋಧಿ ಮೊಳಕೆ ತೈಲವನ್ನು ಡೀಪ್ ಫ್ರೈ ಮಾಡಲು ಬಳಸುವಂತಿಲ್ಲ. ಸಲಾಡ್ ಅಥವಾ ಪಾಸ್ತಾ ಜೊತೆಗೆ ಒಂದೆರಡು ಹನಿ ಮಿಕ್ಸ್ ಮಾಡಿಕೊಂಡು ತಿನ್ನಬಹುದು.