ಚಿಟ್ಟೆಗಳ ದೊಡ್ಡ ಗುಂಪೊಂದು ಜಲಾಗಾರವೊಂದರ ಬಳಿ ನೆರೆದಿರುವ ಸುಂದರ ಚಿತ್ರವೊಂದನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪ್ರವೀಣ್ ಕಸ್ವಾನ್ ಶೇರ್ ಮಾಡಿದ್ದಾರೆ.
“ಮಡ್ ಪಡ್ಲಿಂಗ್ ಎಂದು ಕರೆಯಲಾಗುವ ಈ ಕ್ರಿಯೆಯಲ್ಲಿ ಚಿಟ್ಟೆಗಳು ಲವಣಗಳನ್ನು ಸಂಗ್ರಹಿಸಲು ಹೀಗೆ ಸೇರುತ್ತವೆ,” ಎಂದು ವಿಡಿಯೋ ಕುರಿತು ಪರಿಚಯ ಕೊಟ್ಟಿದ್ದಾರೆ ಕಸ್ವಾನ್.
“ಬಹುತೇಕ ಗಂಡು ಚಿಟ್ಟೆಗಳೇ ಸಾಮಾನ್ಯವಾಗಿ ಹೆಣ್ಣುಗಳನ್ನು ಆಕರ್ಷಿಸಲು ಲವಣಗಳು ಹಾಗೂ ಫೆರೋಮ್‌ಗಳನ್ನು ಸಂಗ್ರಹಿಸುತ್ತವೆ. ನೀರಿನ ಸಣ್ಣ ಆಗರಗಳಿಂದ ಹೀಗೆ ಲವಣಾಂಶಗಳನ್ನು ಚಿಟ್ಟೆಗಳು ಸಂಗ್ರಹಿಸುತ್ತವೆ,” ಎಂದು ಐಎಫ್‌ಎಸ್ ಅಧಿಕಾರಿ ತಿಳಿಸಿದ್ದಾರೆ.