ಹಿಮಾಚಲ ಪ್ರದೇಶ, ಊಟಿ, ಗೋವಾ ಎಲ್ಲ ಸುತ್ತಿ ಬಂದಾಯ್ತು ಇನ್ನೆಲ್ಲಿ ಹೋಗೋಣ ಎಂದು ಪ್ರಶ್ನೆ ಮಾಡುವ ಪ್ರವಾಸಿಗರು ನೋಡಲೇಬೇಕಾದ ಸ್ಥಳವೊಂದಿದೆ. ಅದು ಗುಜರಾತ್. ಹೌದು ಗುಜರಾತಿನಲ್ಲಿಯೂ ಸಾಕಷ್ಟು ನೋಡುವಂತಹ, ಕಣ್ತುಂಬಿಕೊಳ್ಳುವಂತಹ ಪ್ರವಾಸಿ ಸ್ಥಳಗಳಿವೆ.
ಕಚ್ ಮರಭೂಮಿ : ಕಚ್ ಜಿಲ್ಲೆಯ ಉತ್ತರ-ಪೂರ್ವಕ್ಕೆ ಇದು ಹರಡಿದೆ. ಡಿಸೆಂಬರ್ ನ ಕಾರ್ನಿವಾಲ್ ಸಂಭ್ರಮಾಚರಣೆ ವೇಳೆ ನೀವು ಅಲ್ಲಿಗೆ ಭೇಟಿ ನೀಡಬಹುದು ಬಿಳಿ ಉಪ್ಪಿನ ಮರಭೂಮಿ ಹಾಗೂ ಪೂರ್ಣ ಚಂದ್ರನ ಸೌಂದರ್ಯವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು.
ಕೃಷ್ಣನ ದ್ವಾರಕಾ : ಕೃಷ್ಣನ ದ್ವಾರಕೆ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಇದನ್ನು ಗೋಲ್ಡನ್ ಸಿಟಿ ಎಂದೇ ಕರೆಯುತ್ತಾರೆ. ಕೃಷ್ಣನ ಜನ್ಮ ದಿನದಂದು ಇಲ್ಲಿಗೆ ಭಕ್ತವೃಂದವೆ ಹರಿದು ಬರುತ್ತದೆ. ಇದಕ್ಕೆ ಪೌರಾಣಿಕ ಮಹತ್ವವೂ ಇದೆ. ಕೃಷ್ಣ ಭಕ್ತರು ಇಲ್ಲಿಗೆ ಭೇಟಿ ನೀಡಿದ್ರೆ ಉತ್ತಮ ಅನುಭವ ಸಿಗುವುದರಲ್ಲಿ ಎರಡು ಮಾತಿಲ್ಲ.
ಸಪುತಾರಾ: ಗುಜರಾತಿನಲ್ಲಿರುವ ಸುಂದರ ಗಿರಿಧಾಮ, ಡ್ಯಾಂಗ್ ಜಿಲ್ಲೆಯ ಸಹ್ಯಾದ್ರಿ ಪರ್ವತಗಳ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ 873 ಮೀಟರ್ ಎತ್ತರದಲ್ಲಿದೆ. ಮಳೆಗಾಲದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಈ ಪ್ರದೇಶದಕ್ಕೆ ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವವಿದೆ. ಗುಜರಾತ್ ಸುತ್ತಲು ಹೋದವ್ರು ಇಲ್ಲಿಗೊಮ್ಮೆ ಹೋಗಿ ಬನ್ನಿ.
ಸೋಮನಾಥ್ ಮಂದಿರ : ಸೋಮನಾಥ ಜ್ಯೋತಿರ್ಲಿಂಗವೆಂದು ಕರೆಯುತ್ತಾರೆ. ವಿಶ್ವ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿದ್ದು, ಪ್ರತಿದಿನ ಅನೇಕ ಭಕ್ತರು ಇಲ್ಲಿಗೆ ಬರ್ತಾರೆ.
ಗಿರ್ ಜಂಗಲ್ : ಗಿರ್ ಜಂಗಲ್ ಗುಜರಾತ್ ನ ಆಫ್ರಿಕಾ ಎಂದೇ ಪ್ರಸಿದ್ಧಿ ಪಡೆದಿದೆ. ಈ ಅಭಯಾರಣ್ಯ ಸಿಂಹಗಳಿಂದ ಪ್ರಸಿದ್ಧಿ ಪಡೆದಿದೆ. ಇಲ್ಲಿ ಸುತ್ತಾಡುವುದು ಒಂದು ಅನನ್ಯ ಅನುಭವ ನೀಡುತ್ತದೆ.