
ವ್ಯಾಲಂಟೈನ್ ವೀಕ್‌ನಲ್ಲಿ ಎಲ್ಲಿಗಾದರೂ ಸುತ್ತಾಡಲು ಹೋಗಬೇಕು ಅನ್ನೋದು ಅದೆಷ್ಟೋ ಪ್ರೇಮಿಗಳ ಆಸೆ. ಇದಕ್ಕಾಗಿ ದೆಹಲಿಯಲ್ಲಂತೂ ಹಲವಾರು ಬೆಸ್ಟ್ ಸ್ಪಾಟ್‌ಗಳಿವೆ. ಸಂಗಾತಿಯೊಂದಿಗೆ ಇಲ್ಲಿ ಆರಾಮಾಗಿ ಸುತ್ತಾಡಬಹುದು.
ಜಪಾನೀಸ್ ಪಾರ್ಕ್
ಜಪಾನೀಸ್ ಪಾರ್ಕ್‌ನಲ್ಲಿ ಸಂಗಾತಿಯೊಂದಿಗೆ ರೊಮ್ಯಾಂಟಿಕ್ ವಾಕ್‌ಗೆ ಹೋಗಬಹುದು. ಇಲ್ಲಿ ಹಸಿರು, ಸ್ವಚ್ಛವಾದ ಹಾದಿಗಳು, ಕೊಳಗಳು ಮತ್ತು ಸುಂದರವಾದ ಗುಲಾಬಿ ತೋಟಗಳಿವೆ. ಇದು ಪ್ರಣಯ ವಾತಾವರಣವನ್ನು ಸೃಷ್ಟಿಸುತ್ತದೆ. ಬೋಟಿಂಗ್ ಮತ್ತು ಗೇಮಿಂಗ್ ಝೋನ್ ಕೂಡ ಇಲ್ಲಿನ ಆಕರ್ಷಣೆ. ಈ ಉದ್ಯಾನವನವು ಬೆಳಿಗ್ಗೆ 5 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ.
ಲೋಧಿ ಗಾರ್ಡನ್ ರೆಸ್ಟೋರೆಂಟ್
ಸಂಗಾತಿಯೊಂದಿಗೆ ಸಂಜೆ ಉತ್ತಮ ವಾತಾವರಣವಿರುವ ರೆಸ್ಟೋರೆಂಟ್‌ಗೆ ಹೋಗಲು ನೀವು ಯೋಜಿಸುತ್ತಿದ್ದರೆ, ಲೋಧಿ ಗಾರ್ಡನ್ ರೆಸ್ಟೋರೆಂಟ್ ಬೆಸ್ಟ್ ಆಯ್ಕೆಯಾಗಿದೆ. ಮಧ್ಯಾಹ್ನ 12 ರಿಂದ ರಾತ್ರಿ 12ರವರೆಗೆ ಇದು ತೆರೆದಿರುತ್ತದೆ.
ಅಟ್ಲಾಂಟಿಕ್ ವಾಟರ್ ವರ್ಲ್ಡ್
ಅಟ್ಲಾಂಟಿಕ್ ವಾಟರ್ ವರ್ಲ್ಡ್ ದೆಹಲಿಯಲ್ಲಿರುವ ಅತ್ಯುತ್ತಮ ಮೋಜಿನ ಸ್ಥಳಗಳಲ್ಲೊಂದು. ಈ ಉದ್ಯಾನವನದಲ್ಲಿ ರೇನ್ ಡಾನ್ಸ್ ವಿಭಾಗವೂ ಇದೆ. ಅಲ್ಲಿ ಪ್ರೇಮಿಗಳು ರೊಮ್ಯಾಂಟಿಕ್ ಡಾನ್ಸ್ ಮಾಡಬಹುದು. ಬೆಳಗ್ಗೆ 10:30 ರಿಂದ ಸಂಜೆ 6 ರವರೆಗೆ ಯಾವುದೇ ಸಮಯದಲ್ಲಿ ಬೇಕಾದರೂ ಇಲ್ಲಿಗೆ ಹೋಗಬಹುದು.
ಅಡ್ವೆಂಚರ್ ಐಲ್ಯಾಂಡ್
ಸಂಗಾತಿಯೊಂದಿಗೆ ವಾರಾಂತ್ಯವನ್ನು ಕಳೆಯಲು ಅಡ್ವೆಂಚರ್ ಐಲ್ಯಾಂಡ್ ಬೆಸ್ಟ್ ಪ್ಲೇಸ್. ಇಲ್ಲಿ ನೀವು ಒಟ್ಟಿಗೆ ಮೋಜು ಮಾಡಬಹುದು. ಇಲ್ಲಿ ಅಡ್ವೆಂಚರ್ ಗೇಮ್‌ಗಳೂ ಇವೆ. ಬೆಳಗ್ಗೆ 11:30 ರಿಂದ ರಾತ್ರಿ 8:30 ರವರೆಗೆ ಇಲ್ಲಿಗೆ ಹೋಗಬಹುದು.
ಪುರಾನಾ ಕಿಲಾ
ಪುರಾನಾ ಕಿಲಾ, ಮೊಘಲರ ಕಾಲದ ಅತ್ಯಂತ ಹಳೆಯ ಕೋಟೆಗಳಲ್ಲಿ ಒಂದಾಗಿದೆ. ಸುಂದರವಾದ ಉದ್ಯಾನಗಳು ಮತ್ತು ವಾಸ್ತುಶಿಲ್ಪದೊಂದಿಗೆ 350 ಎಕರೆಗಳಷ್ಟು ವಿಸ್ತಾರವಾಗಿದೆ. ಇಲ್ಲಿ ಪ್ರೇಮಿಗಳು ಲೈಟ್ ಎಂಡ್ ಸೌಂಡ್ ಶೋ ವೀಕ್ಷಿಸಲು ಅವಕಾಶವಿದೆ.