ಭಾರತದಂಥ ದೇಶದಲ್ಲಿ ಸೆಲೆಬ್ರಿಟಿಗಳೆಂದರೆ ಅವರ ವೈಯಕ್ತಿಯ ಜೀವನಗಳೂ ಸಹ ಜನರಿಗೆ ಗೊತ್ತಿರುವಷ್ಟರ ಮಟ್ಟಿಗೆ ಫೇಮಸ್ಸಾಗಿರುತ್ತಾರೆ.
ತಮ್ಮ 60ನೇ ವಯಸ್ಸಿನಲ್ಲಿ ಮತ್ತೊಂದು ಮದುವೆಯಾದ ನಟ ಆಶಿಶ್ ವಿದ್ಯಾರ್ಥಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದ್ದಾರೆ. ನಟಿ ರೂಪಾಲಿ ಬರುವಾರೊಂದಿಗೆ ಹಸೆಮಣೆ ಏರಿದ ಆಶಿಶ್ ಈ ವಯಸ್ಸಿನಲ್ಲಿ ಹೊಸ ಸಂಗಾತಿ ಹುಡುಕಿಕೊಂಡು ಸುದ್ದಿ ಮಾಡಿದ್ದಾರೆ.
ಆಶಿಶ್‌ರಂತೆಯೇ ತಡವಾದ ವಯಸ್ಸಿನಲ್ಲಿ ಅಥವಾ ತಮಗಿಂತ ಹಿರಿಯರಾದ ವ್ಯಕ್ತಿಯನ್ನು ವರಿಸಿದ ಸೆಲೆಬ್ರಿಟಿಗಳ ಕುರಿತು ಇದೇ ಸಂದರ್ಭದಲ್ಲಿ ಮಾತುಗಳು ಹರಿದಾಡುತ್ತಿವೆ. ಅಂಥ ಸೆಲೆಬ್ರಿಟಿಗಳ ಪಟ್ಟಿ ಇಂತಿದೆ:
ಕಬೀರ್ ಬೇಡಿ
ತಮಗಿಂತ 30 ವರ್ಷ ಕಡಿಮೆ ವಯಸ್ಸಿನ ಮಹಿಳೆಯೊಂದಿಗೆ ಡೇಟಿಂಗ್ ಮಾಡುವ ಮೂಲಕ ಅನೇಕರ ಹುಬ್ಬೇರಿಸಿದ್ದರು ಕಬೀರ್ ಬೇಡಿ.
ತಮ್ಮ 70ನೇ ವಯಸ್ಸಿನಲ್ಲಿ ಸುದೀರ್ಘ ಕಾಲದ ಪ್ರಿಯತಮೆ ಪರ್ವೀನ್ ದುಸಾಂಜ್ ರನ್ನು ಮದುವೆಯಾಗಿರುವ ಕಬೀರ್ ಆಕೆಯೊಂದಿಗೆ ಸಂಸಾರ ನಡೆಸುತ್ತಿದ್ದಾರೆ.
ಸುಹಾಸಿನಿ ಮುಳೆ
ತಮ್ಮ 60ನೇ ವಯಸ್ಸಿನಲ್ಲಿ ಮದುವೆಯಾದ ಸುಹಾಸಿನಿ ಮುಳೆ ಜನವರಿ 16, 2011ರಲ್ಲಿ ಅತುಲ್ ಗುರ್ಟುರನ್ನು ವರಿಸಿದ್ದಾರೆ. ಇದಕ್ಕೂ ಮುನ್ನ ಸುಹಾಸಿನಿ ಮದುವೆಯಾಗಿರಲಿಲ್ಲ. ಆದರೆ ಗುರ್ಟುಗೆ ಇದು ಎರಡನೇ ಮದುವೆ.
ಊರ್ಮಿಳಾ ಮಾತೋಂಡ್ಕರ್
ತಮ್ಮ 42ನೇ ವಯಸ್ಸಿನಲ್ಲಿ ಮೋಹ್ಸಿನ್ ಅಖ್ತರ್ ಹೆಸರಿನ ವ್ಯಕ್ತಿಯನ್ನು ಮದುವೆಯಾಗುವುದಾಗಿ ಹೇಳಿದ ಊರ್ಮಿಳಾ ತಮ್ಮ ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸಿದ್ದರು.
ಪ್ರೀತಿ ಜ಼ಿಂಟಾ
ಡಿಂಪಲ್ ಕೆನ್ನೆಯ ಬೆಡಗಿ ಪ್ರೀತಿ ಜ಼ಿಂಟಾ ತಮ್ಮ 41ನೇ ವಯಸ್ಸಿನಲ್ಲಿ ಜೀನಿ ಗುಡೆನಫ್‌ರೊಂದಿಗೆ ವಿವಾಹವಾಗಿದ್ದಾರೆ. ಇಬ್ಬರಿಗೂ ಬಾಡಿಗೆ ತಾಯಿ ಮೂಲಕ ಪಡೆದ ಜೈ ಹಾಗೂ ಜಿಯಾ ಹೆಸರಿನ ಇಬ್ಬರು ಮಕ್ಕಳಿದ್ದಾರೆ.
ಲಿಸಾ ರೇ
ತಮ್ಮ 40ನೇ ವಯಸ್ಸಿನಲ್ಲಿ ಲೀಸಾ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಜೇಸನ್ ದೇಹ್ನಿಯೊಂದಿಗೆ ಸಪ್ತಪದಿ ತುಳಿದಿದ್ದರು.
ನೀನಾ ಗುಪ್ತಾ
ಹಿಂದಿನ ಪ್ರೇಮ ಪ್ರಸಂಗಗಳು ವಿಫಲಗೊಂಡ ಬಳಿಕ, ತಮ್ಮ 43ನೇ ವಯಸ್ಸಿನಲ್ಲಿ ದೆಹಲಿ ಮೂಲದ ಚಾರ್ಟರ್ಡ್ ಅಕೌಂಟೆಂಟ್ ವಿವೇಕ್ ಮಿಶ್ರಾರನ್ನು ವರಿಸಿದ ನೀನಾ ಈಗ ಸಂಸಾರ ನೌಕೆಯಲ್ಲಿ ತೇಲುತ್ತಿದ್ದಾರೆ.
ಸಂಜಯ್ ದತ್
ಹಿಂದಿ ಸಿನೆಮಾದ ಖಳನಾಯಕ ತಮ್ಮ 48ನೇ ವಯಸ್ಸಿನಲ್ಲಿ ಮಾನ್ಯತಾರನ್ನು ಮದುವೆಯಾಗಿದ್ದಾರೆ. ಅದಕ್ಕೂ ಮುನ್ನ ಎರಡು ಮದುವೆಗಳನ್ನು ಆಗಿದ್ದ ಸಂಜಯ್, ತಮ್ಮ ಮೂರನೇ ಮದುವೆಯಲ್ಲಿ ದೀರ್ಘಕಾಲದ ಸಂಸಾರ ಮಾಡಿದ್ದಾರೆ.