ಮಂಡ್ಯ: ವಿಚಾರಣೆ ನೆಪದಲ್ಲಿ ಮಹಿಳೆ ಮೇಲೆ ಪೊಲೀಸರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಠಾಣೆಗೆ ಕರೆದುಕೊಂಡು ಬಂದು ಮಹಿಳೆಯನ್ನು ಪೊಲೀಸರು ಥಳಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಡ್ಯ ಪೂರ್ವ ಠಾಣೆ ಪಿಎಸ್ಐ ವಿರುದ್ಧ ಹಲ್ಲೆ ನಡೆಸಿದ್ದಾಗಿ ಆರೋಪ ಮಾಡಲಾಗಿದೆ. ಮಂಡ್ಯ ನಗರದ ರೂಪಾದೇವಿ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ. ರೂಪಾದೇವಿ ಅವರ ಹಸು ಅಡ್ಡ ಬಂದು ಮಹಿಳಾ ಪೊಲೀಸ್ ಸಿಬ್ಬಂದಿ ಬಿದ್ದಿದ್ದರು. ಪರಿಹಾರ ನೀಡುವಂತೆ ರೂಪಾದೇವಿಗೆ ಮಹಿಳಾ ಪೊಲೀಸ್ ಒತ್ತಡ ಹೇರಿದ್ದರು. ಹಣ ನೀಡದಿದ್ದಕ್ಕೆ ಠಾಣೆಗೆ ವಿಚಾರಣೆಗೆ ಕರೆಸಿ ಥಳಿಸಲಾಗಿದೆ. ಪೊಲೀಸರ ಥಳಿತದಿಂದ ಮಹಿಳೆಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಮಹಿಳೆಯನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.