
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಯುವಕರು ಮತ್ತೆ ಗೂಂಡಾಗಿರಿ ನಡೆಸಿದ್ದಾರೆ. ಕನ್ನಡ ಮಾತನಾಡಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಉಪಾಧ್ಯಕ್ಷನನ್ನು ರಕ್ತ ಬರುವಂತೆ ಥಳಿಸಿದ್ದಾರೆ.
ಖಾನಾಪುರ ತಾಲೂಕು ಜಾಂಬೋಟಿ ಕ್ರಾಸ್ ಬಳಿ ನಾರಾಯಣ ಗೌಡರ ಬಣದ ಕರವೇ ಉಪಾಧ್ಯಕ್ಷ ಜಯವಂತ್ ನಿಡಗಲ್ಕರ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಹೋಟೆಲ್ ವೊಂದರಲ್ಲಿ ನಾರಾಯಣಗೌಡ ಬಣದ ಖಾನಾಪುರ ತಾಲೂಕು ಉಪಾಧ್ಯಕ್ಷ ಜಯವಂತ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಮರಾಠಿ ಯುವಕರು ಪರಾರಿಯಾಗಿದ್ದಾರೆ.
ಗಾಯಾಳು ಜಯವಂತ್ ಅವರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.