
ಕಲಬುರಗಿ: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನ ಕೊಲೆ ಮಾಡಲಾಗಿದೆ. ಕಲಬುರ್ಗಿ ನಗರದ ಬೌಲಿಗಲ್ಲಿ ಬಳಿ ತಡರಾತ್ರಿ ಘಟನೆ ನಡೆದಿದೆ.
ರೋಜಾ ಬಡಾವಣೆ ನಿವಾಸಿ ಮುದಾಸಿರ್(19) ಕೊಲೆಯಾದ ಯುವಕ ಎಂದು ಹೇಳಲಾಗಿದೆ. ಬೈಕ್ ಗಳಲ್ಲಿ ಬಂದಿದ್ದ 3 -4 ದುಷ್ಕರ್ಮಿಗಳ ತಂಡದಿಂದ ಕೃತ್ಯ ನಡೆದಿದೆ. ಮುದಾಸಿರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದ್ದು, ಪ್ರೀತಿ ವಿಚಾರಕ್ಕೆ ಮುದಾಸಿರ್ ನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಲಬುರ್ಗಿಯ ರೋಜಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.