ಬೆಂಗಳೂರು: ಪಬ್ ನಲ್ಲಿ ಕನ್ನಡ ಹಾಡು ಹಾಕಿ ಎಂದಿದ್ದಕ್ಕೆ ಹಲ್ಲೆ ನಡೆಸಿದ ಘಟನೆ ಕೋರಮಂಗಲದ ಬದ್ಮಾಶ್ ಪಬ್ ನಲ್ಲಿ ನಡೆದಿದೆ.
ತಡರಾತ್ರಿ 12.30 ರ ಸುಮಾರಿಗೆ ಕನ್ನಡ ಹಾಡು ಹಾಕಿ ಎಂದಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಯುವತಿ ಮತ್ತು ಸಹೋದರನ ಮೇಲೆ ಕೋರಮಂಗಲದ ಬದ್ಮಾಶ್ ಪಬ್ ನಲ್ಲಿ ಹಲ್ಲೆ ಮಾಡಲಾಗಿದೆ. ಸುನಿತಾ, ನಂದಕಿಶೋರ್ ಸೇರಿ 15 ಮಂದಿ ಪಾರ್ಟಿ ಮಾಡುವಾಗ ಡಿಜೆ ಬಳಿ ಬಂದು ಕನ್ನಡ ಹಾಡು ಹಾಕುವಂತೆ ಮನವಿ ಮಾಡಿದ್ದಾರೆ.
ಕನ್ನಡ ಭಾಷೆ ಬಗ್ಗೆ ಕೇವಲವಾಗಿ ಮಾತನಾಡಿದ ಡಿಜೆ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಬೇರೆ ಭಾಷೆ ಹಾಡುಗಳನ್ನು ಹಾಕಿದ ಡಿಜೆ ಕನ್ನಡ ಹಾಡು ಹಾಕಲು ನಿರಾಕರಿಸಿ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ.