ಹುಬ್ಬಳ್ಳಿ: ಪುತ್ರನಿಗೆ ಸರಿಯಾಗಿ ಕೂದಲು ಕತ್ತರಿಸದಿರುವುದಕ್ಕೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಕಟಿಂಗ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಮೂವರ ಮೇಲೆ ಹಲ್ಲೆ ನಡೆಸಲಾಗಿದೆ.
ಹುಬ್ಬಳ್ಳಿಯ ನವನಗರದಲ್ಲಿ ಘಟನೆ ನಡೆದಿದೆ. ವಿಜಯಕುಮಾರ್ ಪುತ್ರನಿಗೆ ಸರಿಯಾಗಿ ಕೂದಲು ಕತ್ತರಿಸಿಲ್ಲ ಎಂದು ರೊಚ್ಚಿಗೆದ್ದು ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.
ಪರದೆ ಹಾಕುವ ಸ್ಟೀಲ್ ಸ್ಟ್ಯಾಂಡ್ ನಿಂದ ವಿಜಯಕುಮಾರ್ ಹಲ್ಲೆ ನಡೆಸಿದ್ದಾರೆ. ಅವರು ಅಪ್ಪಾಜಿ ಜನ ಸೇವಾ ಸಂಘ ಕಟ್ಟಿಕೊಂಡಿದ್ದು, ಕಟಿಂಗ್ ಶಾಪ್ ನಲ್ಲಿದ್ದವರ ಮೇಲೆ ಹಲ್ಲೆ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. . ವಿಜಯಕುಮಾರ್ ವಿರುದ್ಧ ನವನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.