ಹಾಸನ: ಪುತ್ರಿಯನ್ನು ಚುಡಾಯಿಸಬೇಡ ಎಂದು ಬುದ್ದಿವಾದ ಹೇಳಿದ ತಂದೆಯ ಮೇಲೆ ಯುವಕ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನಲ್ಲಿ ನಡೆದಿದೆ. ಯುವತಿಯ ತಂದೆ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಲೂರು ತಾಲ್ಲೂಕಿನ ಜಯಂತಿ ನಗರದಲ್ಲಿ ಯುವಕನೊಬ್ಬ ಪ್ರದೀಪ್ ಅವರ ಪುತ್ರಿಗೆ ಚುಡಾಯಿಸಿದ್ದು, ಇದನ್ನು ಪ್ರಶ್ನಿಸಿದಾಗ ಸ್ನೇಹಿತರೊಂದಿಗೆ ಸೇರಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಿಂದೆಯೂ ಚುಡಾವಣೆ ವಿಚಾರಕ್ಕೆ ಗಲಾಟೆಯಾಗಿ ಆಲೂರು ಪೊಲೀಸರಿಗೆ ದೂರು ನೀಡಲಾಗಿತ್ತು ಎನ್ನಲಾಗಿದೆ.