ಬೆಂಗಳೂರಿನ ಕಸ್ತೂರಿ ನಗರದ ಕೆಫೆ ಕಾಫೀ ಡೇ ನಲ್ಲಿ ಮ್ಯಾನೇಜರ್ ನವೀನ್ ಕುಮಾರ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ.
ರಾತ್ರಿ 9 ಗಂಟೆ ಸುಮಾರಿಗೆ ಕಾಫಿ ಡೇ ಗೆ ಬಂದಿದ್ದ ವ್ಯಕ್ತಿ ವಾಶ್ರೂಮ್ ಬಳಸುವ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ. ಅಸಭ್ಯವಾಗಿ ನಡೆದುಕೊಂಡ ವ್ಯಕ್ತಿಯನ್ನು ಮ್ಯಾನೇಜರ್ ಪ್ರಶ್ನಿಸಿದ್ದು, ಈ ವೇಳೆ ಮ್ಯಾನೇಜರ್ ನವೀನ್ ಕುಮಾರ್ ಬಳಿ ಬಂದ ಆರೋಪಿ ತಲೆಗೆ 10 ಹೊಲಿಗೆ ಹಾಕುವಂತೆ ಹಲ್ಲೆ ಮಾಡಿದ್ದಾನೆ. ಗಾಯಾಳು ನವೀನ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.