
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಗೌತಮಪುರದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಯುವಕರ ಪೈಕಿ ಒಬ್ಬನನ್ನು ಬಂಧಿಸಲಾಗಿದೆ.
ಗೌತಮಪುರದಲ್ಲಿ ಮಾರಿಕಾಂಬ ಜಾತ್ರೆ ವೇಳೆ ಕ್ಷುಲ್ಲಕ ಕಾರಣಕ್ಕೆ ಸ್ಥಳೀಯರು ಗಲಾಟೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಬಿಡಿಸಲು ಸಶಸ್ತ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಮೇಲೆ ಗೌತಮ್ ಮತ್ತು ಭರತ್ ಹಲ್ಲೆ ಮಾಡಿದ್ದಾರೆ.
ಜಾತ್ರೆಯಲ್ಲಿದ್ದ ಸ್ಥಳೀಯರು ಗಲಾಟೆ ಮಾಡಿಕೊಂಡಿದ್ದು, ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಗಲಾಟೆ ಬಿಡಿಸುವಾಗ ಭರತ್ ಮತ್ತು ಗೌತಮ್ ಹಲ್ಲೆ ಮಾಡಿ ಕರ್ತವ್ಯದಲ್ಲಿದ್ದ ಪೊಲೀಸರನ್ನು ಎಳೆದಾಡಿ ತಳ್ಳಾಡಿ ದೌರ್ಜನ್ಯ ಮೆರೆದಿದ್ದು, ಶನಿವಾರ ಆನಂದಪುರಂ ಠಾಣೆ ಪೊಲೀಸರು ಭರತ್ ನನ್ನು ಬಂಧಿಸಿದ್ದಾರೆ. ಗೌತಮ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.