
ಮೈಸೂರು: ಜೈ ಹೋ ಮೋದಿ ಹಾಡು ತೋರಿಸಿದ ಯುವಕನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದಾರೆ.
ಮೈಸೂರು ತಾಲೂಕು ವರುಣಾ ಹೋಬಳಿಯ ಹಳ್ಳಿಕೆರೆಹುಂಡಿ ನಿವಾಸಿ ಲಕ್ಷ್ಮೀ ನಾರಾಯಣ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿರುವ ಲಕ್ಷ್ಮೀನಾರಾಯಣ ಅವರು ಜೈ ಹೋ ಮೋದಿ ಎಂಬ ಕನ್ನಡ ಹಾಡು ರಚಿಸಿ ನಿರ್ದೇಶನ ಮಾಡಿ ಆರ್.ಆರ್. ಫಿಲಂ ಕಂಪನಿ ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದರು.
ಸರ್ಕಾರಿ ಅತಿಥಿಗೃಹದ ಸಮೀಪ ತಾವು ರಚಿಸಿದ್ದ ಮೋದಿ ಹಾಡಿನ ವಿಡಿಯೋವನ್ನು ಯುವಕನಿಗೆ ತೋರಿಸಿ ತಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಶೇರ್ ಮಾಡುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ಸ್ನೇಹಿತರಿಗೆ ಹಾಡು ಕಳಿಸೋಣ ಎಂದು ಕರೆದುಕೊಂಡು ಹೋಗಿ ಸ್ನೇಹಿತರೊಂದಿಗೆ ಸೇರಿ ಯುವಕ ಲಕ್ಷ್ಮೀನಾರಾಯಣ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಲಕ್ಷ್ಮಿನಾರಾಯಣ ಚಾಮರಾಜಪುರದ ಬಿಜೆಪಿ ಕಚೇರಿಗೆ ಬಂದು ಅಲ್ಲಿಂದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.