ಪ್ಲಾಸ್ಟಿಕ್ ಡಬ್ಬಿಯೊಂದರ ಒಳಗೆ ತಲೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದ ಕರಡಿ ಮರಿಯೊಂದನ್ನು ವನ್ಯಜೀವಿ ಸಂರಕ್ಷಣಾ ಅಧಿಕಾರಿಗಳು ರಕ್ಷಿಸಿದ್ದಾರೆ.
ಅಮೆರಿಕದ ಆಶ್‌ವಿಲ್ಲೇಯ ಬೀವರ್‌ಡ್ಯಾಮ್ ಪ್ರದೇಶದಲ್ಲಿ ಈ ಕರಡಿ ಮರಿ ಪ್ಲಾಸ್ಟಿಕ್ ಡಬ್ಬಿ ಮುಖ ಮುಚ್ಚಿಕೊಂಡ ಕಾರಣ ದಿಕ್ಕುತಪ್ಪದೇ ಓಡಾಡುತ್ತಿತ್ತು. ನವೆಂಬರ್ 15ರಂದು ಈ ಕರಡಿ ಮರಿಯ ವಿಚಾರ ಉತ್ತರ ಕರೋಲಿನಾದ ವನ್ಯಜೀವಿ ಸಂಪನ್ಮೂಲಗಳ ಸಮಿತಿಗೆ ತಲುಪಿದೆ.
ನಿಮ್ಮ ಲಿವರ್ ಗೆ ಅಪಾಯ ತಂದೊಡ್ಡುವ ಅಂಶಗಳು…!
ಕೂಡಲೇ ಕಾರ್ಯಪ್ರವೃತ್ತರಾದ ಜಸ್ಟಿನ್ ಮ್ಯಾವೇ ಹಾಗೂ ತಜ್ಞರ ತಂಡ ಪ್ರದೇಶವನ್ನೆಲ್ಲಾ ಎರಡು ದಿನಗಳ ಮಟ್ಟಿಗೆ ಶೋಧಿಸಿ, ನವೆಂಬರ್ 17ರಂದು ಕೊನೆಗೂ ಕರಡಿ ಮರಿಯನ್ನು ಪತ್ತೆ ಮಾಡಿದ್ದಾರೆ. ಆ ವೇಳೆ ಕರಡಿ ಮರಿಯ ಮುಖದ ಸುತ್ತಲೂ ಪ್ಲಾಸ್ಟಿಕ್ ಜಗ್ ಸಿಕ್ಕಿಹಾಕಿಕೊಂಡಿತ್ತು.
ಹತ್ತು ತಿಂಗಳ ಈ ಹೆಣ್ಣು ಕರಡಿ ಮರಿ ತನ್ನ ತಾಯಿಂದ ದೂರವಾಗಿ ಅಲೆಯುತ್ತಿತ್ತು. ಇದೀಗ ಅದನ್ನು ರಕ್ಷಿಸಿ ಮರಳಿ ಕಾಡಿಗೆ ಬಿಡಲಾಗಿದೆ.