alex Certify ಅರಣ್ಯ ಪ್ರದೇಶದ ಮಧ್ಯೆ ಸಂಚರಿಸುತ್ತಿದ್ದವನ ಮೇಲೆ ಕರಡಿ ದಾಳಿ; ಭೀಕರ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರಣ್ಯ ಪ್ರದೇಶದ ಮಧ್ಯೆ ಸಂಚರಿಸುತ್ತಿದ್ದವನ ಮೇಲೆ ಕರಡಿ ದಾಳಿ; ಭೀಕರ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ

ಅರಣ್ಯ ಪ್ರದೇಶದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಕರಡಿಯೊಂದು ದಾಳಿ ನಡೆಸಿದ್ದು, ಇದರ ಭೀಕರ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ತಮಿಳುನಾಡಿನ ತೆಂಕಾಸಿ ಜಿಲ್ಲೆಯಲ್ಲಿ ನಡೆದಿದೆ.

ಈ ವ್ಯಕ್ತಿ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಕರಡಿ ಏಕಾಏಕಿ ದಾಳಿ ನಡೆಸಿದ್ದು, ಆತನನ್ನು ಕೆಳಗೆ ಬೀಳಿಸಿದ ಬಳಿಕ ಮೇಲೆ ಕುಳಿತು ಕಚ್ಚಲು ಆರಂಭಿಸಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ವ್ಯಕ್ತಿಯ ರಕ್ಷಣೆಗೆ ಬಂದರೂ ಕರಡಿ ಕದಲಿಲ್ಲ.

ನಂತರ ಕಲ್ಲುಗಳನ್ನು ಕರಡಿಯತ್ತ ಎಸೆದು ಜೋರಾಗಿ ಗದ್ದಲ ಮಾಡಿದ ವೇಳೆ ಆ ವ್ಯಕ್ತಿಯನ್ನು ಬಿಟ್ಟ ಕರಡಿ, ಗುಂಪಿನ ಕಡೆ ನುಗ್ಗಿದ್ದು ಮತ್ತೆ ಇಬ್ಬರನ್ನು ಗಾಯಗೊಳಿಸಿದೆ. ಇದೀಗ ಗಾಯಗೊಂಡಿರುವ ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರುಗಳ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...