ಸಂಸತ್ತಿನಲ್ಲಿ ತಮ್ಮ ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುಖಾಸುಮ್ಮನೇ ಕಾಂಗ್ರೆಸ್ ಹಾಗೂ ಜವಾಹರಲಾಲ್ ನೆಹರೂ ವಿರುದ್ಧ ವಾಗ್ದಾಳಿ ಮಾಡಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಆಪಾದನೆ ಮಾಡಿದ್ದಾರೆ.
ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ಹಾಗೂ ದೇಶದ ಮೊದಲ ಪ್ರಧಾನಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ ಬಳಿಕ, “ನಿಮಗೆ ಕಾಂಗ್ರೆಸ್ ಹಾಗೂ ಜವಾಹರ್ ಲಾಲ್ ನೆಹರೂರನ್ನು ಅವಮಾನಿಸಬೇಕೆಂದರೆ ನಮ್ಮ ಅತಿಥಿಯಾಗಿ,” ಎಂದು ರಾಹುಲ್ ಗಾಂಧಿ ವರದಿಗಾರರೊಂದಿಗೆ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಹಳೆ ಕಾರ್ ಗಳ ಮಾಲೀಕರಿಗೆ ಗುಡ್ ನ್ಯೂಸ್: ಎಲೆಕ್ಟ್ರಿಕ್ ಕಾರ್ ಆಗಿ ಬದಲಿಸಲು ಅವಕಾಶ ಕಲ್ಪಿಸಿದ ದೆಹಲಿ ಸರ್ಕಾರ
ಭಾರತದಲ್ಲಿ ಎರಡು ದೇಶಗಳ ಸ್ಥಾಪನೆ, ಸಾರ್ವಜನಿಕ ಸಂಸ್ಥೆಗಳ ವಶೀಕರಣ, ಕೆಟ್ಟ ವಿದೇಶಾಂಗ ನೀತಿ ಕಾರಣದಿಂದಾಗಿ ಚೀನಾ ಮತ್ತು ಪಾಕಿಸ್ತಾನಗಳು ಇಂದು ಜೊತೆಯಾಗಿರುವುದು ಹಾಗೂ ಕೋವಿಡ್ ಸಾಂಕ್ರಾಮಿಕದ ನಿರ್ವಹಣೆ ವಿರುದ್ಧ ತಾವು ಎತ್ತಿರ ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾದ ಪ್ರಧಾನಿ ಮೋದಿ ಹೀಗೆ ಮಾತನಾಡಿದ್ದಾರೆ ಎಂದಿದ್ದಾರೆ ರಾಹುಲ್.
“ನನ್ನ ಮುತ್ತಾತ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ತಮ್ಮ ಇಡೀ ಜೀವನವನ್ನೇ ದೇಶಕ್ಕೆ ಕೊಟ್ಟಿದ್ದಾರೆ. ಹಾಗಾಗಿ ನನ್ನ ಮುತ್ತಾತನ ಬಗ್ಗೆ ಪ್ರಮಾಣ ಪತ್ರ ನೀಡುವ ಅಗತ್ಯವಿಲ್ಲ. ಅವರು ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದಾರೆ…… ಅವರ ಬಗ್ಗೆ ಯಾರಾದರೂ ಏನಾದರೂ ಹೇಳಿದರೆ ನಾನು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ,” ಎಂದಿದ್ದಾರೆ ರಾಹುಲ್.
“ನಮ್ಮ ಪಕ್ಷವು ಸತ್ಯಗಳನ್ನು ಹೇಳುವ ಕಾರಣ ಬಿಜೆಪಿಗೆ ಹೆದರಿಕೆ ಆಗುತ್ತದೆ. ಕಾಂಗ್ರೆಸ್ ಹಾಗೂ ನೆಹರೂ ಏನು ಮಾಡಲಿಲ್ಲ ಎಂಬ ಕುರಿತು ಸಂಸತ್ತಿನಲ್ಲಿ ಭಾಷಣ ಮಾಡುವ ಮೋದಿ, ಬಿಜೆಪಿ ತನ್ನ ಮಾತುಗಳನ್ನು ಯಾವ ಮಟ್ಟದಲ್ಲಿ ಉಳಿಸಿಕೊಂಡಿದೆ ಎಂದು ಹೇಳಲೇ ಇಲ್ಲ,” ಎಂದಿದ್ದಾರೆ ರಾಹುಲ್.