ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ. ಕೆಲವೊಂದು ಆಹಾರಗಳು ಹೊಟ್ಟೆ ತುಂಬಿಸುತ್ತವೆ. ಆದ್ರೆ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ತರಕಾರಿ, ಹಣ್ಣುಗಳು ಒಳ್ಳೆಯದು. ಆದ್ರೆ ಕೆಲ ತರಕಾರಿಗಳನ್ನು ಸರಿಯಾಗಿ ಸೇವನೆ ಮಾಡದೆ ಹೋದಲ್ಲಿ ಅನಾರೋಗ್ಯಕ್ಕೆ ಕಾರಣವಾಗುತ್ತವೆ.
ಎಲೆಕೋಸನ್ನು ಹಸಿಯಾಗಿ ಸೇವನೆ ಮಾಡಬಾರದು. ಅನೇಕರು ಸಲಾಡ್ ರೀತಿಯಲ್ಲಿ ಇದ್ರ ಸೇವನೆ ಮಾಡುತ್ತಾರೆ. ಆದ್ರೆ ಎಲೆ ಕೋಸನ್ನು ಹಸಿಯಾಗಿ ಸೇವನೆ ಮಾಡುವುದ್ರಿಂದ ಗ್ಯಾಸ್ ಸಮಸ್ಯೆ ಕಾಡುತ್ತದೆ. ಇನ್ನು ಕೆಲವರು ಹೂಕೋಸನ್ನು ಕೂಡ ಹಸಿಯಾಗಿ ಸೇವನೆ ಮಾಡ್ತಾರೆ. ಇವೆರಡನ್ನೂ ಹಸಿಯಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ. ಈ ತರಕಾರಿಯ ಸಂಪೂರ್ಣ ಲಾಭ ಪಡೆಯಲು ಇದನ್ನು ಬೇಯಿಸಿ ಸೇವನೆ ಮಾಡಬೇಕು.
ಬಿಳಿಬದನೆ ಹೊಟ್ಟೆಯ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹಸಿ ಬದನೆಕಾಯಿ ಸೇವನೆಯಿಂದ ವಾಂತಿ, ತಲೆತಿರುಗುವಿಕೆ ಕಾಣಿಸಿಕೊಳ್ಳುತ್ತದೆ. ಕರುಳಿನ ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ. ಹಾಗಾಗಿ ಬದನೆಕಾಯಿಯನ್ನು ಬೇಯಿಸಿ ತಿನ್ನಬೇಕು.
ಹಿಮೋಗ್ಲೋಬಿನ್ ಹೆಚ್ಚಿಸಲು ಮತ್ತು ತೂಕವನ್ನು ಕಡಿಮೆ ಮಾಡಲು ಬೀಟ್ರೂಟ್ ತುಂಬಾ ಪ್ರಯೋಜನಕಾರಿ. ಕೆಲವರು ಇದನ್ನು ಸಲಾಡ್ ಮತ್ತು ಸ್ಯಾಂಡ್‌ವಿಚ್ ರೂಪದಲ್ಲಿ ಸೇವನೆ ಮಾಡುತ್ತಾರೆ. ಇದ್ರಿಂದ ಮೂತ್ರದ ಬಣ್ಣ ಬದಲಾಗುತ್ತದೆ. ಆದ್ರೆ ಇದಕ್ಕೆ ಹೆದರುವ ಅವಶ್ಯಕತೆಯಿಲ್ಲ. ಇದನ್ನು ಸೀಮಿತ ರೂಪದಲ್ಲಿ ಸೇವನೆ ಮಾಡಬೇಕಾಗುತ್ತದೆ.
ಕ್ಯಾರೆಟ್ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ ಕ್ಯಾರೆಟ್ ತಿನ್ನುವಾಗ ಅದರ ಪ್ರಮಾಣವನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಕ್ಯಾರೆಟ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಚರ್ಮದ ಬಣ್ಣ ಹಳದಿ ಅಥವಾ ಕಿತ್ತಳೆ ಬಣ್ಣಕ್ಕೆ ಬದಲಾಗುತ್ತದೆ.