ಒಂದಲ್ಲ ಒಂದು ಸಮಯದಲ್ಲಿ ಎಲ್ಲರಿಗೂ ಒತ್ತಡ ಕಾಡುವುದು ಸಾಮಾನ್ಯ. ಆದ್ರೆ ಒತ್ತಡ ಅತಿಯಾದ್ರೆ ಅದು ಪ್ಯಾನಿಕ್ ಅಟ್ಯಾಕ್ ರೂಪ ಪಡೆದುಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಒತ್ತಡಕ್ಕೊಳಗಾದ ವ್ಯಕ್ತಿ ಅತಿಯಾಗಿ ಆಡುತ್ತಾನೆ. ಉದ್ವಿಗ್ನತೆಗೆ ಒಳಗಾಗ್ತಾನೆ. ಇದು ಆತನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದ್ರಿಂದ ತಾನು ಸತ್ತೇ ಹೋದೆ ಎಂಬ ಆತಂಕಕ್ಕೂ ಮನುಷ್ಯ ಒಳಗಾಗ್ತಾನೆ. ಆದ್ರೆ ಇದ್ರಿಂದ ಸಾವು ಬರುವುದಿಲ್ಲ. ಆದ್ರೆ ಇದ್ರಿಂದ ಹೊರಬರಲು ಪ್ರತಿಯೊಬ್ಬರೂ ಪ್ರಯತ್ನಪಡಬೇಕು.
ನಿಮಗೆ ಯಾವ ಸಂಗತಿ ಹೆಚ್ಚು ಒತ್ತಡ ನೀಡುತ್ತದೆ ಎಂಬುದನ್ನು ನೀವೇ ಪತ್ತೆ ಮಾಡಬೇಕು. ಒತ್ತಡಕ್ಕೆ ಒಳಗಾಗ್ತಿದ್ದೀರಿ ಎನ್ನುವ ಸಂದರ್ಭದಲ್ಲಿ ಉಲ್ಟಾ ಎಣಿಕೆ ಶುರು ಮಾಡಿ. ಆಗ ನಿಮ್ಮ ಗಮನ ವಿಷ್ಯದ ಬದಲು ಅಂಕೆ ಮೇಲೆ ಹೋಗುತ್ತದೆ. ಮನಸ್ಸು ನಿಧಾನವಾಗಿ ಶಾಂತವಾಗುತ್ತದೆ. ನಂತ್ರ ಕ್ರಿಯೆಟಿವಿಟಿ ಕೆಲಸ ಮಾಡಿ. ವ್ಯಾಯಾಮ ಕೂಡ ಮಾಡಬಹುದು.
ನಿಮ್ಮ ಹತ್ತಿರದಲ್ಲಿರುವ ವಿಷ್ಯದ ಬಗ್ಗೆ ಗಮನ ನೀಡಿ. ಫೋನ್, ನೋಟ್ ಬುಕ್, ಕಿಟಕಿ ಹೊರಗೆ, ಖುರ್ಚಿ ಪಕ್ಕ ಇರುವ ವಸ್ತುಗಳ ಬಗ್ಗೆ ಗಮನ ನೀಡಿ. ಸುತ್ತಮುತ್ತ ಕೇಳಿ ಬರ್ತಿರುವ ಶಬ್ಧಕ್ಕೆ ಮಹತ್ವ ನೀಡಿ. ವಾಹನದ ಹಾರನ್, ಸಂಗೀತ ಹೀಗೆ. ಇಲ್ಲವೆ ನಿಮ್ಮ ಉಡುಗೆ, ಕೂದಲು, ಚಪ್ಪಲಿ ಬಗ್ಗೆ ಆಲೋಚನೆ ಮಾಡಿ.
ಒತ್ತಡ ನಿಯಂತ್ರಣಕ್ಕೆ ಉಸಿರು ಮಹತ್ವದ ಪಾತ್ರವಹಿಸುತ್ತದೆ. ಉಸಿರಾಟದ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಬೇಕು. ಉಸಿರಿನ ಮೂಲಕ ದೇಹದ ನಿಯಂತ್ರಣ ಮಾಡಿ. ನಿಧಾನವಾಗಿ, ದೀರ್ಘವಾಗಿ ಉಸಿರಾಡಲು ಶುರು ಮಾಡಿ.
ಸಾರ್ವಜನಿಕ ಪ್ರದೇಶದಲ್ಲಿದ್ದರೆ ಅವ್ರ ಬಗ್ಗೆ ಗಮನ ನೀಡಿ. ಸುತ್ತಲಿನವರು ಹೇಗಿದ್ದಾರೆ? ಯಾವ ಬಟ್ಟೆ ಧರಿಸಿದ್ದಾರೆ? ಅಲ್ಲಿ ಏನು ನಡೆಯುತ್ತಿದೆ ? ಹೀಗೆ ಬೇರೆ ವಿಷ್ಯಕ್ಕೆ ಗಮನ ನೀಡಿದಾಗ ಒತ್ತಡ ನಿಯಂತ್ರಣಕ್ಕೆ ಬರುತ್ತದೆ. ಈ ಎಲ್ಲ ವಿಧಾನಗಳೂ ಪ್ಯಾನಿಕ್ ಅಟ್ಯಾಕ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಒಂದು ವೇಳೆ ಇದ್ರಿಂದಲೂ ನಿಮ್ಮ ಮನಸ್ಸಿನ ಸ್ಥಿತಿ ಸರಿಯಾಗ್ತಿಲ್ಲವೆಂದಾದ್ರೆ ವೈದ್ಯರ ಬಳಿ ಭೇಟಿ ನೀಡಿ.