ತ್ವಚೆ ಭಾರೀ ಸೂಕ್ಷ್ಮವಾಗಿರುತ್ತದೆ. ಇದನ್ನು ಹುಷಾರಾಗಿ ಆರೈಕೆ ಮಾಡುವುದು ಬಹಳ ಮುಖ್ಯ. ಅದರಲ್ಲೂ ವ್ಯಾಕ್ಸಿಂಗ್ ಮಾಡಿಕೊಂಡ ಬಳಿಕ ನಿಮ್ಮ ತ್ವಚೆ ನಿಮ್ಮ ನಿಯಂತ್ರಣಕ್ಕೆ ಸಿಗದೆ ಹೋಗಬಹುದು. ಆಗ ಏನು ಮಾಡಬಹುದು?
ಚಳಿಗಾಲದಲ್ಲಿ ಬಹುಬೇಗ ತ್ವಚೆ ತೇವಾಂಶ ಕಳೆದುಕೊಳ್ಳುವುದರಿಂದ ವ್ಯಾಕ್ಸ್ ಮಾಡುವ ಬದಲು ನೀವು ಶೇವಿಂಗ್ ಮಾಡಿಕೊಳ್ಳುವುದು ಒಳ್ಳೆಯದು. ಹೆಚ್ಚು ಒತ್ತಡ ಹಾಕದೆ ಉತ್ತಮ ಗುಣಮಟ್ಟದ ಶೇವಿಂಗ್ ಸೆಟ್ ನಿಂದ ಶೇವ್ ಮಾಡಿ.
ವ್ಯಾಕ್ಸ್ ಮಾಡುವಾಗ ಕೂದಲು ಬುಡದಿಂದ ಕಿತ್ತು ಬರುತ್ತದೆ. ಇದು ತ್ವಚೆಗೆ ಹಾನಿ ಮಾಡುವ ಸಂದರ್ಭವೇ ಜಾಸ್ತಿ. ಹಾಗಾಗಿ ತ್ವಚೆ ಒಣಗಿರುವ ಸಂದರ್ಭದಲ್ಲಿ ವ್ಯಾಕ್ಸ್ ಮಾಡುವುದನ್ನು ತಪ್ಪಿಸಿ.
ವ್ಯಾಕ್ಸಿಂಗ್ ಅಥವಾ ಶೇವಿಂಗ್ ಮಾಡಿದ ಬಳಿಕ ಬಿಸಿಲಿಗೆ ನೇರವಾಗಿ ನಿಮ್ಮ ಮೈಯನ್ನು ಒಡ್ಡಬೇಡಿ. ಇದರಿಂದ ತ್ವಚೆಯ ಮೇಲ್ಪದರದ ಮೇಲೆ ಹಾನಿಯಾಗಬಹುದು. ಶೇವಿಂಗ್ ಮಾಡುವಾಗ ಹರಿತವಾದ ಬ್ಲೇಡ್ ಅನ್ನು ಬಳಸಲು ಮರೆಯದಿರಿ.