ಹವಾಮಾನ ಬದಲಾವಣೆ ಅಥವಾ ಬೇರೆ ಯಾವುದೋ ಕಾರಣಕ್ಕೆ ಮಕ್ಕಳಲ್ಲಿ ಬ್ಯಾಕ್ಟೀರಿಯಾ ಇನ್ಫೆಕ್ಷನ್ ಆಗುತ್ತದೆ. ಈ ವೇಳೆ ಆಂಟಿಬಯೋಟಿಕ್ ಔಷಧಿಗಳನ್ನು ನೀಡಲಾಗುತ್ತದೆ. ಆದ್ರೆ ಕಾರಣ ತಿಳಿಯದೇ ಆಂಟಿಬಯೋಟಿಕ್ ಮಾತ್ರೆ ನೀಡುವುದು ಒಳ್ಳೆಯದಲ್ಲ. ಇದು ಮಕ್ಕಳ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಸಾಮಾನ್ಯವಾಗಿ ಮಕ್ಕಳ ಕಿವಿಯಲ್ಲಿ ಇನ್ಫೆಕ್ಷನ್ ಆಗುತ್ತೆ. ಆಗ ವೈದ್ಯರ ಬಳಿ ಹೋಗ್ತೇವೆ. ವೈದ್ಯರು ಆಂಟಿಬಯೋಟಿಕ್ ಮಾತ್ರೆ ನೀಡ್ತಾರೆ. ಮತ್ತೊಮ್ಮೆ ಕಿವಿ ನೋವು ಕಾಣಿಸಿಕೊಂಡಾಗ ವೈದ್ಯರ ಬಳಿ ಹೋಗದೆ ಪಾಲಕರು ಹಿಂದೆ ನೀಡಿದ್ದ ಆಂಟಿಬಯೋಟಿಕ್ ಮಾತ್ರೆಯನ್ನು ನೀಡ್ತಾರೆ. ಇದು ಮಕ್ಕಳಿಗೆ ಹಾನಿಯುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.
ಜ್ವರ ಬಂದಾಗ ತಕ್ಷಣ ಮನೆಯಲ್ಲಿರುವ ಆಂಟಿಬಯೋಟಿಕ್ ಮಾತ್ರೆಯನ್ನು ಪಾಲಕರು ಮಕ್ಕಳಿಗೆ ನೀಡ್ತಾರೆ. ಯಾವ ಜ್ವರ ಎಂಬುದನ್ನು ತಿಳಿಯದೇ ಮಾತ್ರೆ ನೀಡಿದ್ರೆ ಅಪಾಯ ನಿಶ್ಚಿತ. ವೈರಲ್ ಫಿವರ್ ಆಂಟಿಬಯೋಟಿಕ್ ಮಾತ್ರೆಯಿಂದ ಕಡಿಮೆಯಾಗುವುದಿಲ್ಲ.
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ವೈರಲ್ ಇನ್ಫೆಕ್ಷನ್ ನಿಂದಾಗಿ ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮನೆಯಲ್ಲಿರುವ ಮಾತ್ರೆಯನ್ನು ಯಾವುದೇ ಕಾರಣಕ್ಕೂ ನೀಡಬೇಡಿ. ವೈದ್ಯರನ್ನು ಭೇಟಿ ಮಾಡಿ ಮಾತ್ರೆ ನೀಡಿ.
ವಾತಾವರಣ ಬದಲಾದಾಗ ನೆಗಡಿ, ಜ್ವರ ಮಾಮೂಲಿ. ಸ್ವಲ್ಪ ಜ್ವರ ಕಾಣಿಸಿಕೊಂಡರೂ ಮಾತ್ರೆ ನೀಡುವ ಪಾಲಕರಿದ್ದಾರೆ. ಮಾತ್ರೆ ನೀಡುವ ಬದಲು ದೇಶಿಯ ಔಷಧಿಯನ್ನು ಮಕ್ಕಳಿಗೆ ನೀಡುವುದು ಒಳ್ಳೆಯದು.