ಪಾದಗಳ ಸೌಂದರ್ಯ ವೃದ್ಧಿಸಲು ಮಹಿಳೆಯರು ಏನೇನೆಲ್ಲ ಮಾಡ್ತಾರೆ. ಬ್ಲೀಚ್, ಪಿಶ್ ಪೆಡಿಕ್ಯೂರ್ ಹೀಗೆ ನಾನಾ ವಿಧಾನವನ್ನು ಅನುಸರಿಸುತ್ತಾರೆ. ಪಿಶ್ ಪೆಡಿಕ್ಯೂರ್ ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧಿ ಪಡೆದಿದೆ. ಇದೊಂದು ರೀತಿಯ ಚಿಕಿತ್ಸೆ. ಪಿಶ್ ಪೆಡಿಕ್ಯೂರ್ ಮಾಡಿಸಿಕೊಳ್ಳುವ ಮೊದಲು ನೀವು ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಮಾಲ್ ಅಥವಾ ಪಾರ್ಲರ್ ಗಳಲ್ಲಿ ಒಂದೇ ನೀರಿನಲ್ಲಿ ಅನೇಕರಿಗೆ ಪಿಶ್ ಪೆಡಿಕ್ಯೂರ್ ಮಾಡಲಾಗುತ್ತದೆ. ಇದು ಎಷ್ಟು ಸುರಕ್ಷಿತ ಎಂಬುದನ್ನು ಮಹಿಳೆಯರು ಗಮನಿಸಬೇಕು. ಸ್ವಚ್ಛತೆಗೆ ಮಹತ್ವ ನೀಡಿದಲ್ಲಿ ಮಾತ್ರ ಪಿಶ್ ಪೆಡಿಕ್ಯೂರ್ ಸುರಕ್ಷಿತ. ಸ್ವಚ್ಛತೆಗೆ ಎಷ್ಟು ಮಹತ್ವ ನೀಡಲಾಗಿದೆ ಎಂಬುದನ್ನು ಮೊದಲು ತಿಳಿದುಕೊಂಡು ನಂತ್ರ ಪಿಶ್ ಪೆಡಿಕ್ಯೂರ್ ಮಾಡಿಸಿಕೊಳ್ಳಿ.
ನೀರು ಬದಲಿಸದೆ ಹೋದಲ್ಲಿ ನಿಮ್ಮ ಚರ್ಮಕ್ಕೆ ಸೋಂಕು ತಗಲುವ ಸಾಧ್ಯತೆಯಿರುತ್ತದೆ. ನೀರನ್ನು ಬದಲಿಸಲಾಗಿದೆಯಾ? ನೀರು ಸ್ವಚ್ಛವಾಗಿದೆಯಾ ಎಂಬುದನ್ನು ಮೊದಲು ಗಮನಿಸಿ. ಒಮ್ಮೆ ಪಿಶ್ ಪೆಡಿಕ್ಯೂರ್ ಆದ್ಮೇಲೆ ಪಾರ್ಲರ್ ಮಂದಿ ನೀರನ್ನು ಬದಲಿಸದೆ ಹೋದಲ್ಲಿ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ.
ಪಿಶ್ ಪೆಡಿಕ್ಯೂರ್ ವೇಳೆ ನಿಮ್ಮ ಪಾದದಿಂದ ರಕ್ತ ಬಂದ್ರೆ ತಕ್ಷಣ ಪಾದವನ್ನು ನೀರಿನಿಂದ ತೆಗೆಯಿರಿ. ನಂಜುನಿರೋಧಕ ಔಷಧಿಯನ್ನು ಪಾದಕ್ಕೆ ಹಚ್ಚಿ.
ಈಗಾಗಲೇ ಪಾದಕ್ಕೆ ಗಾಯವಾಗಿದ್ದರೆ ಅಪ್ಪಿತಪ್ಪಿಯೂ ಪಿಶ್ ಪೆಡಿಕ್ಯೂರ್ ಮಾಡಿಸಬೇಡಿ.
ರೋಗ ನಿರೋಧಕ ಶಕ್ತಿ ದುರ್ಬಲವಾಗಿದ್ದರೆ ಅಥವಾ ನೀವು ಮದುಮೇಹದಿಂದ ಬಳಲುತ್ತಿದ್ದರೆ ಪೆಡಿಕ್ಯೂರ್ ಮಾಡಿಸಬೇಡಿ.