ನೀವು ತಿನ್ನುವ ಆಹಾರದ ಮೇಲೆ ಗಮನ ಇಡಿ. ಯಾಕೆಂದ್ರೆ ನೀವು ಸೇವಿಸುವ ಆಹಾರ ದೈಹಿಕವೊಂದೇ ಅಲ್ಲ ಮಾನಸಿಕ ಸಮಸ್ಯೆಗೂ ಕಾರಣವಾಗುತ್ತೆ. ಆಹಾರವೇ ಖಿನ್ನತೆಗೆ ಕಾರಣವಾಗಬಹುದು ನೆನಪಿರಲಿ.
ಹೌದು, ಕೆಲ ಆಹಾರ ಖಿನ್ನತೆಗೆ ಕಾರಣವಾಗುತ್ತೆ. ಅದ್ರಲ್ಲಿ ಬಿಳಿ ಬ್ರೆಡ್ ಮತ್ತು ಪಾಸ್ತಾ ಕೂಡ ಒಂದು. ಬ್ರೆಡ್ ಹಾಗೂ ಪಾಸ್ತಾ ಸೇವಿಸುವವರು ಹೆಚ್ಚು ಖಿನ್ನತೆಗೊಳಗಾಗ್ತಾರೆ ಅಂತಾ ಸಂಶೋಧನೆಯೊಂದು ಹೇಳಿದೆ.
ಸಂಶೋಧನೆ ಪ್ರಕಾರ ಬ್ರೆಡ್ ಹಾಗೂ ಪಾಸ್ತಾದಲ್ಲಿ ಕಾರ್ಬೋ ಹೈಡ್ರೇಟ್ ಅಂಶ ಜಾಸ್ತಿ ಇರುತ್ತೆ. ಜೊತೆಗೆ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಇದು ಕಿರಿಕಿರಿ ಹಾಗೂ ಹೆದರಿಕೆಗೆ ಕಾರಣವಾಗುತ್ತದೆ. ಹಸಿರು ತರಕಾರಿ ಹಾಗೂ ಧಾನ್ಯಗಳನ್ನು ಹೆಚ್ಚಾಗಿ ಸೇವಿಸಿದ್ರೆ ಖಿನ್ನತೆಯಿಂದ ಮುಕ್ತಿ ಹೊಂದಬಹುದೆಂದು ವರದಿ ಹೇಳಿದೆ.
ಸಂಶೋಧನೆಯ ಪ್ರಕಾರ ಬ್ರಿಟನ್ ನಲ್ಲಿ ನೂರರಲ್ಲಿ ಮೂರು ಮಂದಿ ಖಿನ್ನತೆಗೊಳಗಾಗ್ತಾರೆ. ಇದಕ್ಕೆ ಕಾರಣ ಪಾಸ್ತಾ. ಬಿಳಿ ಬ್ರೆಡ್ ಹಾಗೂ ಪಾಸ್ತಾ ದೇಹದಲ್ಲಿ ಬೊಜ್ಜಿನಾಂಶವನ್ನು ಹೆಚ್ಚು ಮಾಡುವುದಲ್ಲದೇ, ನಿದ್ರಾ ಹೀನತೆಯನ್ನುಂಟು ಮಾಡುತ್ತದೆ. ಆಯಾಸಕ್ಕೂ ಇವೇ ಕಾರಣ.
ಮಹಾನಗರಿಯ ಓಟದ ಬದುಕು ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರ್ತಾ ಇದೆ. ಇದರಿಂದಾಗಿ ಆಯಾಸ, ನಿದ್ರಾ ಹೀನತೆ ಸಾಮಾನ್ಯ.