ಹೇರ್ ಕಲರಿಂಗ್ ಕೊಳ್ಳುವ ಮತ್ತು ಬಳಸುವ ಮುನ್ನ ಈ ಕೆಲವು ಅಂಶಗಳನ್ನು ಮರೆಯದೆ ಅನುಸರಿಸಿ. ಹೇರ್ ಕಲರಿಂಗ್ ಕೊಳ್ಳುವ ಮುನ್ನ ಅದಕ್ಕೆ ಬಳಸಿದ ವಸ್ತುಗಳು ಮತ್ತು ರಾಸಾಯನಿಕ ಪ್ರಭಾವದ ಬಗ್ಗೆ ಓದಿ ನೋಡಿ.
ಸಾಧ್ಯವಾದಷ್ಟು ಕಡಿಮೆ ಕೆಮಿಕಲ್ ಗಳನ್ನು ಬಳಸಿದ ಕಲರಿಂಗ್ ಕೊಳ್ಳಿ. ಸಾಧ್ಯವಾದರೆ ನೈಸರ್ಗಿಕ ಕಲರಿಂಗ್ ಗಳನ್ನು ಮನೆಯಲ್ಲೇ ತಯಾರಿಸಿ.
ಹಚ್ಚಿಕೊಳ್ಳುವಾಗ ಉತ್ತಮ ದರ್ಜೆಯ ಹೇರ್ ಬ್ರಶ್ ಬಳಸಿ. ಕೂದಲಿಗೆ ಮಾತ್ರ ಕಲರಿಂಗ್ ತಾಕುವಂತೆ ನೋಡಿಕೊಳ್ಳಿ. ನೆತ್ತಿಯ ಅಥವಾ ತಲೆಯ ಚರ್ಮಕ್ಕೆ ಇದು ತಾಕಿದಾಕ್ಷಣ ಕೂದಲಿನ ತಲೆಗೂ ಗಾಢ ಕಪ್ಪು ಬಣ್ಣ ಅಂಟಿಕೊಳ್ಳುತ್ತದೆ. ಇದು ಸಭೆ ಸಮಾರಂಭಗಳಿಗೆ ತೆರಳುವಾಗ ಅಸಹ್ಯವಾಗಿ ಕಾಣಿಸಬಹುದು.
ಬೈತಲೆಯಲ್ಲಿ ಬಣ್ಣ ಉಳಿಯುವುದನ್ನು ತಪ್ಪಿಸಲು ಹಚ್ಚಿದಾಕ್ಷಣ ಆ ಭಾಗವನ್ನು ಸ್ವಚ್ಛಗೊಳಿಸಿ. ಇದಕ್ಕಾಗಿ ಒದ್ದೆ ಟವಲ್ ಬಳಸಿ. ಕಾರ್ಯಕ್ರಮವಿರುವ ಮೂರು ದಿನ ಮುಂಚೆಯೇ ಬಣ್ಣ ಹಚ್ಚುವ ಕೆಲಸ ಮುಗಿಸಿ. ನಾಲ್ಕಾರು ಬಾರಿ ಸ್ನಾನ ಮಾಡುವುದರಿಂದಲೂ ತ್ವಚೆಯ ಮೇಲೆ ಅಂಟಿರುವ ಕಪ್ಪು ಬಣ್ಣ ದೂರವಾಗುತ್ತದೆ.
ರಾಸಾಯನಿಕ ಬೆರೆಸಿದ ಬಣ್ಣವನ್ನು ಹೆಚ್ಚು ಹೊತ್ತು ತಲೆಯಲ್ಲಿ ಬಿಡುವುದರಿಂದ ಕೂದಲಿಗೆ ಹಾನಿಯಾಗುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿ ಹಚ್ಚಿದ ಅರ್ಧದಿಂದ ಒಂದು ಗಂಟೆಯೊಳಗೆ ತಲೆ ತೊಳೆಯಿರಿ. ಕೂದಲಿನ ಆರೈಕೆಗೆ ಗಮನ ಕೊಡಿ. ಅಂದರೆ ತೆಂಗಿನೆಣ್ಣೆಯಿಂದ ಮಸಾಜ್ ಮಾಡಿ ಸ್ನಾನ ಮಾಡಲು ಮರೆಯದಿರಿ.