ನಿದ್ರೆ ಬಂದ್ರೆ ಸಾಕು, ಎಲ್ಲೆಂದರಲ್ಲಿ ಮಲಗ್ತಾರೆ ಕೆಲವರು. ಮಲಗುವ ಕೋಣೆಯಲ್ಲಂತೂ ಎಲ್ಲ ವಸ್ತುಗಳೂ ಬಿದ್ದಿರುತ್ತವೆ. ಮಲಗುವಾಗ ತಲೆ ಪಕ್ಕದಲ್ಲಿ ನೀರನ್ನು ಇಟ್ಟುಕೊಳ್ಳುವ ಅಭ್ಯಾಸ ಕೆಲವರಿಗಿದ್ದರೆ ಮತ್ತೆ ಕೆಲವರು ಆಭರಣಗಳನ್ನು ತಲೆ ಬದಿಯಲ್ಲಿಟ್ಟು ಮಲಗುತ್ತಾರೆ.
ಜ್ಯೋತಿಷ್ಯ ಹಾಗೂ ಧಾರ್ಮಿಕ ಗ್ರಂಥಗಳಲ್ಲಿ ಮಲಗುವ ಕೋಣೆಗೆ ಅದರದೆ ಆದ ವಿಶೇಷತೆಗಳಿವೆ. ಮಲಗುವ ಕೋಣೆ ಕೂಡ ನಮ್ಮ ಆರೋಗ್ಯ, ಸಂಪತ್ತು ಹಾಗೂ ಸಂಬಂಧದ ಮೇಲೆ ಪ್ರಭಾವ ಬೀರುತ್ತದೆ. ಕೆಲವೊಂದು ವಸ್ತುಗಳು ಮಲಗುವ ಕೋಣೆಯಲ್ಲಿದ್ದರೆ ಅಶುಭ. ಅದರಿಂದ ಆರೋಗ್ಯ, ಸಂಬಂಧ ಹಾಗೂ ಸಂಪತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳಿರುತ್ತದೆ. ಯಾವ ವಸ್ತುಗಳನ್ನಿಟ್ಟರೆ ಹಾನಿ ಎಂಬುದರ ವಿವರ ಇಲ್ಲಿದೆ.
ನೀರನ್ನು ತಲೆಯ ಬಳಿ ಇಟ್ಟುಕೊಂಡು ಮಲಗಬಾರದು.ಇದರಿಂದ ಮಾನಸಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ.
ತಲೆಯ ಬಳಿ ಪರ್ಸ್ ಕೂಡ ಇಟ್ಟರೆ ಅನವಶ್ಯಕ ಖರ್ಚು ಜಾಸ್ತಿಯಾಗುತ್ತದೆ.
ದಿಂಬಿನ ಕೆಳಗೆ ಬೆಳ್ಳಿ ಅಥವಾ ಬಂಗಾರದ ಆಭರಣಗಳನ್ನು ಕೂಡ ಇಡಬಾರದು. ಅದೃಷ್ಟ ದುರ್ಬಲವಾಗುತ್ತದೆ.
ನೇಲ್ ಕಟರ್, ಬ್ಲೇಡ್ ಅಥವಾ ಕತ್ತರಿಯನ್ನು ಇಟ್ಟುಕೊಂಡು ಮಲಗಬಾರದು. ಇದರಿಂದ ಪುರುಷ ಶಕ್ತಿ ಕಡಿಮೆಯಾಗುತ್ತದೆ.
ಕಬ್ಬಿಣದ ವಸ್ತುಗಳನ್ನಿಡುವುದರಿಂದ ಕಳ್ಳತನವಾಗುವ ಸಾಧ್ಯತೆಗಳಿರುತ್ತವೆ.
ಪಾದರಕ್ಷೆಗಳನ್ನಿಟ್ಟುಕೊಂಡು ಮಲಗುವುದರಿಂದ ಕೆಟ್ಟ ಕನಸು ಬೀಳುವ ಸಾಧ್ಯತೆಗಳಿರುತ್ತವೆ.