ಸುಂದರವಾಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಹುಡುಗಿಯರಂತೂ ತಮ್ಮ ಸೌಂದರ್ಯ ವರ್ಧನೆಗೆ ಇನ್ನಿಲ್ಲದ ಕಸರತ್ತು ಮಾಡ್ತಾರೆ. ಇಂತಹ ಕೆಲವೊಂದು ಅಭ್ಯಾಸಗಳು ನಿಮ್ಮ ಅಂದವನ್ನು ಹೆಚ್ಚಿಸುವ ಬದಲು ಸೌಂದರ್ಯಕ್ಕೆ ಕುತ್ತು ತರಬಹುದು.
ರಾತ್ರಿ ಮುಖ ತೊಳೆಯದೇ ಮಲಗುವುದು : ರಾತ್ರಿ ಮಲಗುವಾಗ ಮುಖವನ್ನು ಸ್ವಚ್ಛವಾಗಿಟ್ಟುಕೊಂಡು ಮಲಗಬೇಕು. ಆಯಾಸವಾಗಿದೆ ಅಂತಾ ಹಾಗೇ ಮಲಗಿದ್ರೆ ನಿಮ್ಮ ತ್ವಚೆಗೆ ಹಾನಿಯಾಗುತ್ತದೆ. ಮುಖದ ಹೊಳಪು ಕೂಡ ಮರೆಯಾಗುತ್ತದೆ.
ಕಡಿಮೆ ನೀರು ಕುಡಿಯುವುದು : ನೀರನ್ನು ಕಡಿಮೆ ಕುಡಿದರೆ ನಿಮ್ಮ ಚರ್ಮವು ಒಣಗಲು ಪ್ರಾರಂಭಿಸುತ್ತದೆ. ತುರಿಕೆ, ಚರ್ಮ ಬಿಗಿಯಾಗುವುದು ಇವೆಲ್ಲ ನಿರ್ಜಲೀಕರಣದ ಲಕ್ಷಣಗಳು. ಸಾಕಷ್ಟು ನೀರು ಕುಡಿದರೆ ಚರ್ಮ ಕಾಂತಿಯುಕ್ತವಾಗಿರುತ್ತದೆ.
ಸನ್ ಸ್ಕ್ರೀನ್ ಹಚ್ಚದಿರುವುದು : ಬಹುತೇಕರು ಮನೆಯಿಂದ ಹೊರಡುವಾಗ ಮುಖಕ್ಕೆ ಸನ್ ಸ್ಕ್ರೀನ್ ಹಚ್ಚುವುದೇ ಇಲ್ಲ. ಇದರಿಂದ ಚರ್ಮಕ್ಕೆ ಸಂಬಂಧಪಟ್ಟ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸನ್ಸ್ಕ್ರೀನ್ನಲ್ಲಿ ಜಿಂಕ್ ಆಕ್ಸೈಡ್, ಟೈಟಾನಿಯಂ ಆಕ್ಸೈಡ್ ನಂತಹ ಪ್ರಮುಖ ಅಂಶಗಳಿರುತ್ತವೆ. ಇವು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತವೆ.