alex Certify ಈ ಜೀರ್ಣಕಾರಿ ಕ್ಯಾನ್ಸರ್ ಜೀವಕ್ಕೆ ಮಾರಕವಾಗಬಹುದು ಎಚ್ಚರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಜೀರ್ಣಕಾರಿ ಕ್ಯಾನ್ಸರ್ ಜೀವಕ್ಕೆ ಮಾರಕವಾಗಬಹುದು ಎಚ್ಚರ….!

World Digestive Health Day 2024: ಈ 4 ಮಾರಣಾಂತಿಕ ಜೀರ್ಣಕಾರಿ ಕ್ಯಾನ್ಸರ್, ಲಕ್ಷಣಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು..! | Times Now Kannada

ನಮ್ಮ ದೇಹದ ಒಟ್ಟಾರೆ ಆರೋಗ್ಯ ಇರುವುದು ನಮ್ಮ ಜೀರ್ಣಕ್ರಿಯೆಯಲ್ಲಿ. ಯಾಕೆಂದರೆ ದೇಹ ಆರೋಗ್ಯವಾಗಿರಲು ಪೋಷಕಾಂಶಗಳನ್ನು ನೀಡುವ ಕೆಲಸ ಜೀರ್ಣಕ್ರಿಯೆ ಮಾಡುತ್ತದೆ. ಹಾಗಾಗಿ ಅದನ್ನು ಆರೋಗ್ಯವಾಗಿ ನೋಡಿಕೊಳ್ಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಕೆಟ್ಟ ಜೀವನಶೈಲಿಯಿಂದಾಗ ಜೀರ್ಣಕಾರಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಾರೆ. ಅವುಗಳ ಬಗ್ಗೆ ನೀವು ತಿಳಿದುಕೊಳ್ಳಿ.

ಕೊಲೊರೆಕ್ಟಲ್ ಕ್ಯಾನ್ಸರ್ : ಇದು ಕೊಲೊನ್ ಮತ್ತು ಗುದನಾಳದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಬೇಕು. ಇಲ್ಲವಾದರೆ ಇದು ಜೀವಕ್ಕೆ ಮಾರಕವಾಗಬಹುದು.

ದೊಡ್ಡ ಕರುಳಿನ ಕ್ಯಾನ್ಸರ್ : ಇದು ವಯಸ್ಸಾದವರಲ್ಲಿ ಹೆಚ್ಚು ಕಂಡುಬರುವಂತಹ ಕ್ಯಾನ್ಸರ್ ಆಗಿದೆ. ಇದರಿಂದ ಮಲದಲ್ಲಿ ರಕ್ತ ಕಂಡುಬರುತ್ತದೆ. ಇದನ್ನು ಪತ್ತೆ ಹಚ್ಚಿ ಸರಿಯಾದ ಚಿಕಿತ್ಸೆ ಪಡೆಯಬೇಕು. ಯಾಕೆಂದರೆ ಈ ಕ್ಯಾನ್ಸರ್ ನಿಂದ ಹಲವರು ಜೀವ ಕಳೆದುಕೊಂಡಿದ್ದಾರೆ.

ಲಿವರ್ ಕ್ಯಾನ್ಸರ್ : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಈ ಕಾಯಿಲೆಯಿಂದ ಸಾವನಪ್ಪುತ್ತಿದ್ದಾರೆ. ಅತಿಯಾದ ಆಲ್ಕೋಹಾಲ್ ಸೇವನೆ, ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ, ಮತ್ತು ಹೈಪಟೈಟಿಸ್ ಬಿ ಮತ್ತು ಸಿ ಸೇರಿದಂತೆ ಮುಂತಾದ ಪಿತ್ತಜನಕಾಂಗದ ಕಾಯಿಲೆಗಳಿಂದ ಜನರು ಲಿವರ್ ಕ್ಯಾನ್ಸರ್ ಗೆ ಒಳಗಾಗುತ್ತಾರೆ.

ಅನ್ನನಾಳದ ಕ್ಯಾನ್ಸರ್ : ಇದು ಒಂದು ಗಂಭೀರ ಸ್ವರೂಪದ ಕ್ಯಾನ್ಸರ್ ಆಗಿದೆ. ಇದು ಕೊನೆಯ ಹಂತದಲ್ಲಿ ಹೆಚ್ಚು ಪತ್ತೆಯಾಗುತ್ತದೆ. ಮದ್ಯಪಾನ, ಧೂಮಪಾನ, ಅನ್ನನಾಳದ ಕಾಯಿಲೆಗಳಿಂದ ಜನರು ಈ ಕ್ಯಾನ್ಸರ್ ಗೆ ತುತ್ತಾಗುತ್ತಾರೆ.

ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್ : ಇದನ್ನು ಪ್ರಾರಂಭಿಕ ಹಂತದಲ್ಲಿ ಕಂಡುಹಿಡಿಯುವುದು ಕಷ್ಟಕರ. ಈ ರೋಗಕ್ಕೆ ಒಳಗಾದವರು 5 ವರ್ಷಕ್ಕೂ ಕಡಿಮೆ ವರ್ಷಗಳ ಕಾಲ ಬದುಕುಳಿಯುತ್ತಾರೆ. ಈ ಕ್ಯಾನ್ಸರ್ ಬರುವವರೆಗೂ ಅದರ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ.

ಹಾಗಾಗಿ ಯಾವುದೇ ಗ್ಯಾಸ್, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅದನ್ನು ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ. ಇದರಿಂದ ಕ್ಯಾನ್ಸರ್ ಗೆ ಚಿಕಿತ್ಸೆಯಾದರೂ ಪಡೆಯಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...