ಕೂದಲಿನ ಹೊಳಪಿಗೆ ಮತ್ತು ನಯವಾಗಿಸಲು ಕಂಡಿಷನರ್ ಅಗತ್ಯ. ಆದರೆ ಕಂಡಿಷನರ್ ಬಳಸುವಾಗ ಕೆಲವೊಂದು ವಿಷ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ.
ಕೂದಲಿಗೆ ಅನುಗುಣವಾಗಿ ಕಂಡಿಷನರ್ ಬಳಸಬೇಕು.
ಕೂದಲು ತೆಳುವಾಗುತ್ತಿರುವವರು ಕಂಡಿಷನರ್ ಮಾಡುವಾಗ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ತೆಳ್ಳನೆಯ ಕೂದಲು ತುಂಡಾಗುವ ಸಾಧ್ಯತೆ ಹೆಚ್ಚು. ಬಾಚಣಿಗೆಯನ್ನು ಪದೇ ಪದೇ ಬಳಸಬೇಡಿ. ವಾರಕ್ಕೊಮ್ಮೆ ಕಂಡೀಶನರ್ ಬಳಸಿ ನಿಮ್ಮ ಕೂದಲನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಬಹುದು. ಇದು ಕೂದಲನ್ನು ಹೆಚ್ಚು ನಯವಾಗಿಸುತ್ತದೆ. ಈ ಕಾರಣದಿಂದಾಗಿ ಕೂದಲು ಹೆಚ್ಚು ಗಂಟಾಗುವುದಿಲ್ಲ. ಕೂದಲು ಉದುರುವ ಸಾಧ್ಯತೆಯೂ ಕಡಿಮೆ.
ನಿಮ್ಮ ಕೂದಲು ದಪ್ಪವಾಗಿದ್ದರೆ ಕಂಡಿಷನರ್ ಬಳಸೋದು ಒಳ್ಳೇದು. ದಪ್ಪ ಕೂದಲು ಆರೋಗ್ಯಕರವಾಗಿರುವುದರ ಸಂಕೇತ. ಆದರೆ ಕೂದಲನ್ನು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುವುದು ಅಗತ್ಯ. ಹಾಗಾಗಿ ಕಂಡಿಷನರ್ ಸಾಕಷ್ಟು ಉಪಯುಕ್ತವಾಗಿದೆ. ಪ್ರತಿದಿನ ಕೂದಲು ತೊಳೆಯಲು ಸಾಧ್ಯವಾಗದಿದ್ದರೂ ಸಹ, ವಾರಕ್ಕೊಮ್ಮೆಯಾದರೂ ನಿಮ್ಮ ಕೂದಲನ್ನು ಒದ್ದೆ ಮಾಡಿ ಮತ್ತು ಕಂಡಿಷನರ್ ಹಾಕಿ ಸ್ನಾನ ಮಾಡಿ.
ಒಣ ಮತ್ತು ನಿರ್ಜೀವ ಕೂದಲಿಗೆ ಕಂಡಿಷನರ್ ಬೇಕು. ಕೆಲವೊಮ್ಮೆ ಬಿಸಿಲಿನ ಶಾಖ, ಮಾಲಿನ್ಯ, ಧೂಳು ಮತ್ತು ಹೇರ್ ಸ್ಟೈಲಿಂಗ್ ಉಪಕರಣಗಳು ಕೂದಲನ್ನು ಒಣಗಿಸುತ್ತವೆ. ಒಣ ಕೂದಲಿನಲ್ಲಿ ತೇವಾಂಶ ಇರುವುದಿಲ್ಲ. ಆದ್ದರಿಂದ ಕೂದಲಿನ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಮಾಯಿಶ್ಚರೈಸಿಂಗ್ ಕಂಡಿಷನರ್ ಅಗತ್ಯವಿರುತ್ತದೆ. ತೇವಾಂಶವನ್ನು ಮರಳಿ ಪಡೆಯಲು ನೀವು ಪ್ರತಿ ದಿನ ಕಂಡಿಷನರ್ ಬಳಸಬಹುದು. ಕೂದಲು ಶುಷ್ಕತೆಯನ್ನು ತಡೆಗಟ್ಟಲು, ನಿಮ್ಮ ಕೂದಲಿಗೆ ತಿಂಗಳಿಗೆ ಒಂದು ಅಥವಾ ಎರಡು ಬಾರಿ ಡೀಪ್ ಕಂಡಿಷನಿಂಗ್ ಮಾಡಿ.