ಮಳೆಗಾಲದಲ್ಲಿ ಪ್ರವಾಸವನ್ನು ಇಷ್ಟಪಡದವರು ಯಾರೂ ಇಲ್ಲವೇನೋ? ಮಾನ್ಸೂನ್ ನಲ್ಲಿ ಸುತ್ತಮುತ್ತಲಿನ ಪ್ರದೇಶವೆಲ್ಲಾ ಹಸಿರು. ಹೀಗಾಗಿ ಪ್ರವಾಸಿಗರು ಮಳೆಗಾಲಕ್ಕಾಗಿ ಕಾಯುತ್ತಿರುತ್ತಾರೆ.
ವನ್ಯಜೀವಿ ಪ್ರವಾಸ, ಬೆಟ್ಟಗಳ ಚಾರಣಕ್ಕೆ ತೆರಳುವಾಗ ಕಡ್ಡಾಯವಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳು ಇಲ್ಲಿವೆ. ಹೆಗಲ ಮೇಲಿನ ಭಾರವಾದ ಚೀಲವನ್ನು ಮುಚ್ಚುವಂತ ರೈನ್ ಕೋಟ್ ಹೊಂದಿರುವುದು ಬಹಳ ಮುಖ್ಯ. ಅದರಲ್ಲೂ ವಾಟರ್ ಪ್ರೂಫ್ ರೈನ್ ಕೋಟ್ ಗೆ ಅದ್ಯತೆ ನೀಡಿ. ಇದು ನಿಮ್ಮ ದೇಹವನ್ನು ಒದ್ದೆಯಾಗದಂತೆ ರಕ್ಷಿಸುತ್ತದೆ. ಅದರೊಂದಿಗೆ ಛತ್ರಿಗೂ ಜಾಗ ಇರಲಿ.
ನಿಮ್ಮ ಬ್ಯಾಗ್ ಕೂಡಾ ವಾಟರ್ ಪ್ರೂಫ್ ಅಗಿರಲಿ. ಅದು ಒಳಗಿನ ವಸ್ತುಗಳು ಒದ್ದೆಯಾಗದಂತೆ ತಡೆಯುತ್ತದೆ. ಅನೇಕ ಜಿಪ್ ಗಳಿರುವ ಅಂತರಿಕ ಪಾಕೆಟ್ ಗಳಿರುವ ಬ್ಯಾಗ್ ಅನ್ನೇ ಖರೀದಿಸಿ. ಕ್ಯಾಮರಾಕ್ಕೂ ಜಲ ನಿರೋಧಕ ಕವರ್ ಬಳಸಿ. ಡಿಎಸ್ಎಲ್ಅರ್ ಬಳಸದಿರುವುದೇ ಹೆಚ್ಚು ಸೂಕ್ತ.
ಪವರ್ ಬ್ಯಾಂಕ್ ಮರೆಯದೆ ಕೊಂಡೊಯ್ಯಿರಿ. ಮೊಬೈಲ್ ಫೋನ್ ಡೆಡ್ ಅದ ಸಂದರ್ಭದಲ್ಲಿ ಇದು ಬೇಕಾಗುತ್ತದೆ. ಪ್ರವಾಸದ ದಿನಗಳ ಆಧಾರದ ಮೇಲೆ ಒಂದಕ್ಕಿಂತ ಹೆಚ್ಚು ಪವರ್ ಬ್ಯಾಂಕ್ ಬೇಕಿದ್ದರೆ ಬಳಸಿ.