ಬೇಸಿಗೆ ಕಾಲಿಟ್ಟಿದೆ. ಮಧ್ಯಾಹ್ನದ ಬಿಸಿಲು ತಡೆಯಲು ಸಾದ್ಯವಾಗುತ್ತಿಲ್ಲ ಎಂದುಕೊಂಡು ಲಿಂಬೆ ಹಣ್ಣಿನ ಜ್ಯೂಸ್ ತಯಾರಿಸಿ ಕುಡಿಯುವುದು ಒಳ್ಳೆಯದೇ. ಆದರೆ ಇದು ಎಷ್ಟರ ಪ್ರಮಾಣದಲ್ಲಿದ್ದರೆ ಒಳ್ಳೆಯದು ಎಂಬುದು ನಿಮಗೆ ಗೊತ್ತೇ?
ನಿಂಬೆ ಹಣ್ಣನ್ನು ವಿಪರೀತ ಸೇವಿಸುವುದರಿಂದ ಹಲ್ಲು ಹಾಗೂ ಒಸಡು ದುರ್ಬಲವಾಗುತ್ತದೆ. ಒಸಡಿನ ಸಮಸ್ಯೆ ಇರುವವರು ಲಿಂಬೆಯಿಂದ ದೂರ ಇರುವುದೇ ಒಳ್ಳೆಯದು.
ನಿಂಬೆ ಜ್ಯೂಸ್ ಹೆಚ್ಚು ಸೇವಿಸುವುದರಿಂದ ಡಿಹೈಡ್ರೇಶನ್ ಉಂಟಾಗುತ್ತದೆ. ನೀರು ಕಡಿಮೆ ಕುಡಿಯುವುದರಿಂದ ದೇಹಕ್ಕೆ ಎಷ್ಟು ಸಮಸ್ಯೆಗಳಿವೆಯೋ, ಅಷ್ಟೇ ಸಮಸ್ಯೆ ಹೆಚ್ಚು ನೀರು ಕುಡಿಯುವುದರಿಂದಲೂ ಆಗುತ್ತದೆ.
ನಿಂಬೂ ಜ್ಯೂಸ್ ಹೆಚ್ಚು ಕುಡಿದರೆ ಕಿಡ್ನಿ ಸ್ಟೋನ್ ಕಾಣಿಸಿಕೊಳ್ಳಬಹುದು. ಇದರಲ್ಲಿ ಸಿಟ್ರಸ್ ಆಮ್ಲದ ಜೊತೆ ಅಕ್ಸಿಲೇಟ್ ಕೂಡಾ ಇದ್ದು ಹರಳಿನ ರೂಪದಲ್ಲಿ ಕಿಡ್ನಿಯಲ್ಲಿ ಸಂಗ್ರಹವಾಗುತ್ತದೆ.
ಅಸಿಡಿಟಿ ಸಮಸ್ಯೆ ಇರುವವರಿಗೆ ಇದು ವಿಪರೀತ ತೊಂದರೆ ಕೊಡುತ್ತದೆ. ಹೆಚ್ಚು ಸೇವನೆಯಿಂದ ಮೂಳೆಗಳು ದುರ್ಬಲಗೊಳ್ಳಬಹುದು. ಸೆನ್ಸಿಟಿವ್ ಸ್ಕಿನ್ ಇರುವವರು ಅಲರ್ಜಿ ಸಮಸ್ಯೆ ಎದುರಿಸಬೇಕಾದೀತು. ಹಾಗಾಗಿ ಎಚ್ಚರವಿರಲಿ.