alex Certify ʼಹೃದಯಾಘಾತʼ ಕ್ಕೂ ಮುನ್ನ ಕಾಣಿಸಿಕೊಳ್ಳುವ ಈ ಲಕ್ಷಣಗಳ ಕುರಿತು ಇರಲಿ ಎಚ್ಚರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹೃದಯಾಘಾತʼ ಕ್ಕೂ ಮುನ್ನ ಕಾಣಿಸಿಕೊಳ್ಳುವ ಈ ಲಕ್ಷಣಗಳ ಕುರಿತು ಇರಲಿ ಎಚ್ಚರ…..!

ಹೃದಯವನ್ನು ಸದೃಢವಾಗಿರಿಸಿಕೊಳ್ಳುವುದು ಬಹಳ ಮುಖ್ಯ.ಯಾಕೆಂದರೆ ಹೃದಯದ ಸಮಸ್ಯೆ ಒಮ್ಮೆ ಕಾಣಿಸಿಕೊಂಡರೆ ಜೀವನವಿಡೀ ನೀವು ಔಷಧಗಳನ್ನು ಅವಲಂಬಿಸಬೇಕಾಗುತ್ತದೆ. ಬದಲಾಗುತ್ತಿರುವ ಜೀವನಶೈಲಿಯಲ್ಲಿ ನಿಮ್ಮ ಆಹಾರ ಪದ್ಧತಿ ಮತ್ತು ವ್ಯಾಯಾಮದ ಬಗ್ಗೆ ಹೆಚ್ಚಿನ ಗಮನ ಕೊಡಲು ಪ್ರಯತ್ನಿಸಿ.

ಒತ್ತಡಕ್ಕೆ ಒಳಗಾಗಬೇಡಿ. ಇದಲ್ಲದೆ ಅಧಿಕ ಕೊಲೆಸ್ಟ್ರಾಲ್ ಕೂಡ ಹೃದಯವನ್ನು ಅನರ್ಹಗೊಳಿಸುತ್ತದೆ. ಹೃದಯದ ಆರೋಗ್ಯದಲ್ಲಿ ವ್ಯತ್ಯಯ ಉಂಟಾದಾಗ ಕಂಡುಬರುವ ಲಕ್ಷಣಗಳೇನು ಎಂಬುದನ್ನು ಕೂಡ ತಿಳಿದುಕೊಳ್ಳಲೇಬೇಕು. ಇದನ್ನು ನೀವು ನಿರ್ಲಕ್ಷಿಸಬಾರದು.

ಹೃದಯಾಘಾತಕ್ಕೂ ಮುನ್ನ ಕಂಡು ಬರುವ 6 ಲಕ್ಷಣಗಳು..…

1. ಹೃದಯ ಅಸ್ವಸ್ಥಗೊಂಡಿದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಎದೆ ನೋವು ಅಥವಾ ಅಸ್ವಸ್ಥತೆ ಹೃದ್ರೋಗದ ಸಾಮಾನ್ಯ ಲಕ್ಷಣವಾಗಿದೆ. ಎದೆ ನೋವು, ಬಿಗಿತ ಮತ್ತು ಒತ್ತಡದ ಭಾವನೆಯು ಹೃದಯಾಘಾತದ ಲಕ್ಷಣಗಳಾಗಿರಬಹುದು. ಆದರೆ ಎದೆ ನೋವು ಇಲ್ಲದೆ ಕೂಡ ಹೃದಯಾಘಾತ ಸಂಭವಿಸಬಹುದು ಎಂಬುದನ್ನು ನೆನಪಿನಲ್ಲಿಡಿ.

2. ಇದರ ಹೊರತಾಗಿ ಆಯಾಸ, ಅಜೀರ್ಣ ಮತ್ತು ಹೊಟ್ಟೆ ನೋವು ಕೂಡ ಹೃದಯಾಘಾತಕ್ಕೂ ಮುನ್ನ ಕಂಡು ಬರುವ ಲಕ್ಷಣಗಳು. ನೀವು ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮಲ್ಲಿ ದಣಿವು ಹೆಚ್ಚಾಗುತ್ತದೆ. ಹೊಟ್ಟೆ ನೋವು ಕೂಡ ಬರಬಹುದು.

3. ದೇಹದ ಎಡಭಾಗದಲ್ಲಿ ನೋವಿದ್ದರೆ ಅದು ಕೂಡ ಕೆಲವೊಮ್ಮೆ ಹೃದಯದ ಸಮಸ್ಯೆಯ ಸಂಕೇತವೇ ಆಗಿರುತ್ತದೆ. ಈ ಸ್ಥಿತಿಯಲ್ಲಿ, ನೋವು ಎದೆಯಿಂದ ಪ್ರಾರಂಭವಾಗುತ್ತದೆ ಮತ್ತು ಕೆಳಭಾಗದಲ್ಲಿ ಹೆಚ್ಚಾಗುತ್ತದೆ.

4. ತಲೆತಿರುಗುವಿಕೆಯೂ ಹೃದಯ ವೈಫಲ್ಯದ ಸಂಕೇತಗಳಲ್ಲೊಂದು. ಡಿಹೈಡ್ರೇಶನ್‌ ನಿಂದಲೂ ಕೆಲವೊಮ್ಮೆ ತಲೆತಿರುಗಿದಂತಾಗುತ್ತದೆ. ಆದ್ರೆ ಇದು ಕೂಡ ಹೃದಯದ ಅನಾರೋಗ್ಯದ ಲಕ್ಷಣವೇ ಆಗಿದೆ.

5. ಗಂಟಲು ಅಥವಾ ದವಡೆಯಲ್ಲಿ ನೋವು ಕೂಡ ಹೃದಯಾಘಾತದ ಸಂಕೇತವಾಗಿರಬಹುದು. ಬಹುತೇಕ ಸಂದರ್ಭಗಳಲ್ಲಿ ಗಂಟಲು ಅಥವಾ ದವಡೆಯ ನೋವು ಹೃದಯಕ್ಕೆ ಸಂಬಂಧಿಸಿರುವುದಿಲ್ಲ. ಇದು ಶೀತ ಅಥವಾ ಸೈನಸ್‌ನಿಂದ ಉಂಟಾಗುತ್ತದೆ, ಆದರೆ ಕೆಲವೊಮ್ಮೆ ಎದೆ ನೋವು ಅಥವಾ ಒತ್ತಡದಿಂದಾಗಿ, ನೋವು ಗಂಟಲು ಅಥವಾ ದವಡೆಗೆ ಹರಡುತ್ತದೆ.

6. ಸ್ವಲ್ಪ ನಡೆದರೆ, ಅಲ್ಪ ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುವುದು ವೀಕ್ನೆಸ್‌ ನಿಂದ ಎಂದು ತಪ್ಪಾಗಿ ಭಾವಿಸಬೇಡಿ. ಅತಿಯಾದ ದಣಿವು ಕೂಡ ಹೃದಯಾಘಾತದ ಮುನ್ಸೂಚನೆಯಾಗಿರಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...