ಮನೆಗಳಲ್ಲಿ ಪ್ರಾಣಿಗಳನ್ನು ಸಾಕಿ ಸಲಹುವುದು ಸಾಮಾನ್ಯ. ಕೆಲವು ಪ್ರಾಣಿಗಳನ್ನು ಸಾಕುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ. ಮನೆಯಲ್ಲಿ ಯಾವ ಪ್ರಾಣಿಗಳನ್ನು ಸಾಕುವುದು ಶುಭಫಲಗಳನ್ನು ತರುತ್ತದೆ, ಯಾವ ಪ್ರಾಣಿಗಳನ್ನು ಸಾಕುವುದು ಅಶುಭ ಅನ್ನೋದನ್ನು ತಿಳಿದುಕೊಳ್ಳಬೇಕು.
ಮನೆಯಲ್ಲಿ ನಾಯಿ, ಕುದುರೆ, ಮೊಲದಂತಹ ಪ್ರಾಣಿಗಳನ್ನು ಸಾಕಬಹುದು. ಇವುಗಳನ್ನು ಸಲಹುವುದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಹಿಂದೂ ಧರ್ಮದಲ್ಲಿ ನಾಯಿಯನ್ನು ಕಾಲಭೈರವನ ಸೇವಕ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ನಾಯಿಯನ್ನು ಸಾಕಿದರೆ ಲಕ್ಷ್ಮಿದೇವಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ.
ಇದರೊಂದಿಗೆ ಮನೆಯಲ್ಲಿ ಮೀನು ಸಾಕುವುದು ಕೂಡ ಒಳ್ಳೆಯದು. ಚಿನ್ನದ ಬಣ್ಣದ ಮೀನುಗಳನ್ನು ಸಾಕಿದರೆ ಶುಭಫಲಗಳು ದೊರೆಯುತ್ತವೆ. ಮನೆಯಲ್ಲಿ ಸಂತೋಷ ನೆಲೆಸುತ್ತದೆ.
ಮನೆಯಲ್ಲಿ ಮೊಲವನ್ನು ಸಾಕುವುದು ಮಂಗಳಕರ. ಮನೆಯಲ್ಲಿ ಮೊಲವನ್ನು ಸಾಕಿದರೆ ನಕಾರಾತ್ಮಕ ಶಕ್ತಿಯು ಹೊರಹೋಗುತ್ತದೆ. ಮೊಲವು ಮನೆಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ.