ಆನ್ಲೈನ್ ವಹಿವಾಟು ಹೆಚ್ಚಾಗಿದೆ. ಬೀದಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಮಾಲ್ ಗಳವರೆಗೆ ಎಲ್ಲ ಕಡೆ ಈಗ ಆನ್ಲೈನ್ ವಹಿವಾಟು ನಡೆಯುತ್ತದೆ. ಆನ್ಲೈನ್ ವಹಿವಾಟು ಹೆಚ್ಚಾಗ್ತಿದ್ದಂತೆ ಮೋಸ-ವಂಚನೆ ಪ್ರಕರಣ ಕೂಡ ಹೆಚ್ಚಾಗಿದೆ. ಆನ್ಲೈನ್ ನಲ್ಲಿ ವ್ಯವಹಾರ ನಡೆಸುವ ಮೊದಲು ಜನರು ಎಚ್ಚರಿಕೆ ವಹಿಸಬೇಕು. ಕೆಲವೊಂದು ವಿಷ್ಯವನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಆತುರದಲ್ಲಿ ವಹಿವಾಟು ನಡೆಸಿ ಯಡವಟ್ಟು ಮಾಡಿಕೊಳ್ಳಬಾರದು.
ಖುಷಿಯಾಗಿರಲು ಅಳವಡಿಸಿಕೊಳ್ಳಿ ಮಕ್ಕಳ ಈ ಗುಣ
ಆನ್‌ಲೈನ್ ವಹಿವಾಟಿನಲ್ಲಾಗುತ್ತಿರುವ ವಂಚನೆಯನ್ನು ತಪ್ಪಿಸಲು ದೂರಸಂಪರ್ಕ ಇಲಾಖೆ ಜನರಿಗೆ ಮಾರ್ಗಸೂಚಿಗಳನ್ನು ನೀಡಿದೆ. ಪಾವತಿ ಮಾಡುವವರೆಗೆ ಯಾವುದೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಡಿ ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.
ಯಾವುದೇ ಲಿಂಕ್ ಕ್ಲಿಕ್ ಮಾಡುವ ಮೊದಲು ಯೋಚಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಬ್ಯಾಂಕ್‌ಗಳು ಎಂದಿಗೂ ಕೆವೈಸಿ ನವೀಕರಣಕ್ಕಾಗಿ ಲಿಂಕ್ ಕಳುಹಿಸುವುದಿಲ್ಲ. ಒಟಿಪಿ, ಸಿವಿವಿ, ಪಿಐಎನ್ ನಂತಹ ಗೌಪ್ಯ ಡೇಟಾವನ್ನು ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಮುಂಚಿತವಾಗಿಯೇ ಹಣ ವರ್ಗಾವಣೆ ಮಾಡುವಂತೆ ಕೇಳಿ ಲಿಂಕ್ ಕಳುಹಿಸಿದಲ್ಲಿ ಜಾಗರೂಕರಾಗಿರಿ. ಮೊದಲನೆಯದಾಗಿ ವ್ಯಕ್ತಿ ಅಥವಾ ಕಂಪನಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತೆಗೆದುಕೊಳ್ಳಿ ಎಂದಿದೆ.
ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಮುಖ ಮತ್ತು ಸೂಕ್ಷ್ಮ ಮಾಹಿತಿ ಮತ್ತು ಪಾಸ್ವರ್ಡ್‌ಗಳನ್ನು ಸೇವ್ ಮಾಡಬೇಡಿ ಎಂದು ಹೇಳಲಾಗಿದೆ.
ಅಶ್ಲೀಲ ಮತ್ತು ಆನ್‌ಲೈನ್ ಗೇಮಿಂಗ್‌ನ ಅನುಮಾನಾಸ್ಪದ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬೇಡಿ. ಇದು ಫೋನ್ ಹ್ಯಾಕ್ ಗೆ ಕಾರಣವಾಗಬಹುದು. ಅಜ್ಞಾತ ವೈ-ಫೈ ನೆಟ್‌ವರ್ಕ್‌ಗಳನ್ನು ಬಳಸಬೇಡಿ. ಯಾವುದೇ ಅನುಮಾನಾಸ್ಪದ ನೆಟ್‌ವರ್ಕ್ ಬಳಸಿ ಹಣಕಾಸಿನ ವಹಿವಾಟು ನಡೆಸಬೇಡಿ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.