alex Certify Be Alert : ಎಚ್ಚರ…! ಇನ್ಮೇಲೆ ತಮಾಷೆಗೆ 112 ಗೆ ಕರೆ ಮಾಡಿದ್ರೆ ಕಠಿಣ ಕಾನೂನು ಕ್ರಮ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Be Alert : ಎಚ್ಚರ…! ಇನ್ಮೇಲೆ ತಮಾಷೆಗೆ 112 ಗೆ ಕರೆ ಮಾಡಿದ್ರೆ ಕಠಿಣ ಕಾನೂನು ಕ್ರಮ..!

ಬೆಂಗಳೂರು :   112 ಸಹಾಯವಾಣಿಗೆ ಅನಗತ್ಯ ಕರೆಗಳು ಬರುತ್ತಿರುವುದು ಹೆಚ್ಚಾಗಿದೆ. ಸಕಾರಣವಿಲ್ಲದೇ ಕರೆ ಮಾಡಿ ಸಣ್ಣ-ಪುಟ್ಟ ವಿಚಾರಕ್ಕೆ ಹೊಯ್ಸಳ ಸಿಬ್ಬಂದಿಯನ್ನು ಕರೆಸಿಕೊಂಡು ಕಮಾಂಡ್ ಸೆಂಟರ್ ಮತ್ತು ಹೊಯ್ಸಳ ಸಿಬ್ಬಂದಿಯ ಕಾಲಹರಣ ಮಾಡುವಾಗ ನಿಜವಾಗಿಯೂ ಸಮಸ್ಯೆಯಲ್ಲಿ ಇರುವವರಿಗೆ ನೆರವು ಸಿಗದೇ ಅವರು ಅಪಾಯದಲ್ಲಿ ಸಿಲುಕುವ ಸಾಧ್ಯತೆ ಇದೆ.

ನೀವು ಟೈಂಪಾಸ್ ಮಾಡುವ ಸಮಯದಲ್ಲಿ ಒಂದು ಜೀವ ಹೋಗಬಹುದಾದ ಸಂಭವ ಇರುತ್ತದೆ. ಯಾರೋ ಆತ್ಮಹತ್ಯೆಗೆ ಯತ್ನಿಸಿರಬಹುದು, ಅಮಾಯಕರ ಮೇಲೆ ರೌಡಿಗಳು ಹಲ್ಲೆಗೆ ಮುಂದಾಗಿರಬಹುದು. ಸಕಾಲದಲ್ಲಿ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಹೋದರೆ ಅವರ ಜೀವ ಉಳಿಸಬಹುದಾಗಿದೆ. ಹೀಗಾಗಿ ಹುಡುಗಾಟಿಕೆಗೆ 112ಕ್ಕೆ ಕರೆ ಮಾಡುವುದನ್ನು ನಿಲ್ಲಿಸಿ.

ಇನ್ನು ಮುಂದೆ ಈ ರೀತಿಯ ಅನಗತ್ಯ ಕರೆಗಳು ಬಂದಲ್ಲಿ ಅಂತಹ ನಂಬರ್ ಅನ್ನು ತಾತ್ಕಾಲಿಕವಾಗಿ 24 ಗಂಟೆ ಬ್ಲಾಕ್ ಮಾಡಲಾಗುತ್ತದೆ. ಪದೇ ಪದೇ ಫ್ರಾಡ್ ಕಾಲ್ ಮಾಡುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...