ಬೆಂಗಳೂರು: ಕಾವೇರಿ 2.0 ತಂತ್ರಾಂಶವನ್ನು ಯುನಿಫೈಡ್ ಲ್ಯಾಂಡ್ ಮ್ಯಾನೇಜ್ ಮೆಂಟ್ ಸಿಸ್ಟಂ(ಯುಎಲ್ಎಂಎಸ್) ತಂತ್ರಾಂಶ ಜೋಡಣೆ ಮಾಡಲಾಗಿದ್ದು, ಇಂದಿನಿಂದ ಬಿಡಿಎ ಸೈಟ್ ಗೂ ಇ-ಖಾತಾ ಕಡ್ಡಾಯ ಮಾಡಲಾಗಿದೆ.
ಬಿಡಿಎ ಬಡಾವಣೆ, ವಸತಿ ಯೋಜನೆಗಳ ಆಸ್ತಿಗಳ ದಸ್ತಾವೇಜು ನೋಂದಣಿಗೆ ಇಂದಿನಿಂದ ಇ- ಖಾತಾ ಕಡ್ಡಾಯ ಮಾಡಲಾಗಿದ್ದು, ಇಲ್ಲವಾದಲ್ಲಿ ಮಾರಾಟ, ದಾನ, ವಿಲ್ ಇತರ ಯಾವುದೇ ನೋಂದಣಿಗೆ ಸಬ್ ರಿಜಿಸ್ಟ್ರಾರ್ ನಲ್ಲಿ ಪರಿಗಣಿಸಲಾಗುವುದಿಲ್ಲ.
ಬಿಡಿಎ ಲೇಔಟ್, ವಸತಿ ಯೋಜನೆಗಳ ಆಸ್ತಿಗೆ ಯೂನಿಫೈಡ್ ಲ್ಯಾಂಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ನಲ್ಲಿ ಇ –ಖಾತಾ ವಿತರಿಸಲಾಗುತ್ತದೆ. ಯುಎಲ್ಎಂಎಸ್ ತಂತ್ರಾಂಶವನ್ನು ಕಾವೇರಿ-2.0 ತಂತ್ರಾಂಶಕ್ಕೆ ಜೋಡಣೆ ಮಾಡಲಾಗಿದ್ದು, ದಸ್ತಾವೇಜು ನೋಂದಣಿಗೆ ಬಂದಾಗ ಮಾಹಿತಿ ಪಡೆದು ನೋಂದಣಿ ಪ್ರಕ್ರಿಯೆ ನಡೆಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸೂಚನೆ ನೀಡಿದೆ.
ಸ್ವತ್ತುಗಳ ನೋಂದಣಿ ವೇಳೆ ಸಾರ್ವಜನಿಕರು ಮೋಸ ಹೋಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಿ -ಖಾತಾದಿಂದ ಮಾತ್ರ ಸ್ವತ್ತಿನ ಸ್ವರೂಪ ಮತ್ತು ನೈಜ ಮಾಲೀಕರ ಗುರುತು ಸಾಧ್ಯವಾಗುತ್ತದೆ. ನಕಲಿ ದಾಖಲೆ ಸೃಷ್ಟಿಸುವವರಿಗೆ ಕಡಿವಾಣ ಬೀಳಲಿದ್ದು, ಖರೀದಿದಾರರಿಗೂ ಅಸಲಿ ಮಾಲೀಕರ ಗುರುತು ಸಿಗಲಿದೆ.