ಬೆಂಗಳೂರು: ಬಿಡಿಎ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ ಮನೆಗಳನ್ನು ಸಕ್ರಮಗೊಳಿಸಲಾಗುವುದು. ಮಾರುಕಟ್ಟೆ ದರದ ಶೇಕಡ 25 ರಷ್ಟು ಹಣ ಪಾವತಿಸಿಕೊಂಡು ಸಕ್ರಮಗೊಳಿಸಲು ನಿರ್ಧರಿಸಲಾಗಿದೆ. 12 ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಮನೆಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ.
ಬಿಡಿಎ ಸ್ವಾಧೀನದ ನಿವೇಶನಗಳಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರಿಗೆ ಈ ಅಕ್ರಮ-ಸಕ್ರಮಕ್ಕೆ ಅವಕಾಶವಿದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ. ನಿವೇಶನದ ಅಳತೆಗೆ ತಕ್ಕಂತೆ ಶೇಕಡವಾರು ಹಣವನ್ನು ನಿಗದಿ ಮಾಡಲಾಗುವುದು. ನಗರದಲ್ಲಿ ಸುಮಾರು 95 ಸಾವಿರ ಮನೆಗಳು ಬಿಡಿಎ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣವಾಗಿದೆ ಎಂದು ಅಂದಾಜಿಸಲಾಗಿದ್ದು, ಇಂತಹ ಮನೆಗಳನ್ನು ಪತ್ತೆಮಾಡಲು ಸಮೀಕ್ಷೆ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.