ಬೆಂಗಳೂರು: ಬಿಡಿಎ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬಿಡಿಎ ಡಿಎಸ್ ಸೇರಿದಂತೆ 8 ಜನರ ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಆರೋಪಿಗಳು ನಕಲಿ ದಾಖಲೆ ಪತ್ರಗಳನ್ನು ಇಟ್ಟುಕೊಂಡು ಬಿಡಿಎ ಜಾಗದ ಗುತ್ತಿಗೆ, ಮಾರಾಟ ಒಪ್ಪಂದದ ಕ್ರಯಪತ್ರಗಳನ್ನು ಸೃಷ್ಟಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದೀಗ ಆರೋಪಿಗಳಾದ ಅನಿಲ್ ಕುಮಾರ್, ಎಸ್.ಎಂ. ಮಂಗಳಾ ಸೇರಿದಂತೆ ಒಟ್ಟು 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅದರಲ್ಲಿಯೂ ಪ್ರಮುಖ ಆರೋಪಿಗಳಾದ ಅನಿಲ್ ವಿರುದ್ಧ 3 ಎಫ್ಐಆರ್ ಹಾಗೂ ಮಂಗಳಾ ವಿರುದ್ಧ 4 ಎಫ್ಐಆರ್ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.