ಟಿ-20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಕ್ರಿಕೆಟ್ ಅಭಿಮಾನಿಗಳು ವಿಶ್ವಕಪ್ ವೀಕ್ಷಣೆಗೆ ತುದಿಗಾಲಿನಲ್ಲಿದ್ದಾರೆ. ಟೀಂ ಇಂಡಿಯಾ ಎಲ್ಲ ಸಿದ್ಧತೆಗಳನ್ನು ನಡೆಸುತ್ತಿದೆ. ಈಗಾಗಲೇ ಭಾರತ ತಂಡದ ಘೋಷಣೆಯಾಗಿದೆ. ಬುಧವಾರ, ಟೀಂ ಇಂಡಿಯಾದ ಜರ್ಸಿ ಬಿಡುಗಡೆಯಾಗಿದೆ.
ವೈರಲ್ ಚಾಲೆಂಜ್ ಗೆ ಹೊಸ ಟ್ವಿಸ್ಟ್ ಕೊಟ್ಟ ಸಾನಿಯಾ ಮಿರ್ಜ಼ಾ
ಬಿಸಿಸಿಐ, ಟೀಂ ಇಂಡಿಯಾದ ಹೊಸ ಜರ್ಸಿಯನ್ನು ಬಿಡುಗಡೆ ಮಾಡಿದೆ. ಟೀಂ ಇಂಡಿಯಾದ ಕೆಲ ಆಟಗಾರರು ಹೊಸ ಜರ್ಸಿಯಲ್ಲಿ ಮಿಂಚುತ್ತಿದ್ದಾರೆ. ಬಿಸಿಸಿಐ, ಹೊಸ ಜರ್ಸಿ ಫೋಟೋವನ್ನು ಹಂಚಿಕೊಂಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಅನೇಕ ಆಟಗಾರರು ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರತಿ ತಿಂಗಳು ಹಣ ಸಿಗಬೇಕೆಂದ್ರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ
ನೀಲಿ ಬಣ್ಣದ ಹೊಸ ಜರ್ಸಿಯ ಪ್ರಾಯೋಜಕತ್ವವನ್ನು ಬೈಜಸ್ ವಹಿಸಿಕೊಂಡಿದೆ. ಅಕ್ಟೋಬರ್ 17 ರಿಂದ ಪಂದ್ಯಗಳು ಶುರುವಾಗಲಿವೆ. ಆದ್ರೆ ಟೀಂ ಇಂಡಿಯಾ ಮೊದಲ ದಿನವೇ ಮೈದಾನಕ್ಕಿಳಿಯುತ್ತಿಲ್ಲ. ಅಕ್ಟೋಬರ್ 24 ರಂದು ಟಿ 20 ವಿಶ್ವಕಪ್‌ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯ ಹೆಚ್ಚು ವಿಶೇಷವಾಗಿದೆ. ಭಾರತ ಮೊದಲ ಪಂದ್ಯವನ್ನು ಪಾಕಿಸ್ತಾನದ ಜೊತೆ ಆಡಲಿದೆ.
ಟಿ 20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ 5 ಪಂದ್ಯಗಳು ನಡೆದಿದ್ದು, ಇದುವರೆಗೂ ಪಾಕಿಸ್ತಾನ ಒಂದು ಪಂದ್ಯವನ್ನು ಗೆದ್ದಿಲ್ಲ. ಅಕ್ಟೋಬರ್ 24 ರಂದು, ಉಭಯ ತಂಡಗಳು ಬರೋಬ್ಬರಿ ಎರಡು ವರ್ಷಗಳ ನಂತರ ಮುಖಾಮುಖಿಯಾಗಲಿವೆ. 2019 ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆದಿತ್ತು.